ಯಲ್ಲಾಪುರ: ಪಟ್ಟಣದ ಕೃಷಿ ಇಲಾಖೆಯ ಕಾರ್ಯಾಲಯದ ಆವರಣದಲ್ಲಿ ” ಕೃಷಿ ವಸ್ತು ಪ್ರದರ್ಶನ ” ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಕೃಷಿ ಕ್ಷೇತ್ರ ಬಲಗೊಳಿಸಲು ಸರ್ಕಾರ ವಿವಿಧ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಅರ್ಹ ಫಲಾನುಭವಿಗಳಿಗೆ ಮಿನಿ ಟ್ರಾಕ್ಟರ್ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವ ವಿವಿಧ ಪರಿಕರಗಳನ್ನು ಸಚಿವ ಶಿವರಾಮ ಹೆಬ್ಬಾರ್ ಅವರು ಈ ವೇಳೆ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಪ.ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ತಾಲೂಕಾ ಆತ್ಮಾ ಕಮಿಟಿ ಅಧ್ಯಕ್ಷ ಗಣೇಶ ಹೆಗಡೆ,ಪಣತಗೇರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಆತ್ಮಾ ಕಮಿಟಿ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.