ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಶ್ರೀ ಲಕ್ಷ್ಮೀನರಸಿಂಹ ದೇವರ ಮಹಾ ರಥೋತ್ಸವವು ಮಾ.15 ರ ಮಂಗಳವಾರ ನಡೆಯಲಿದ್ದು ,ಇದರ ಪ್ರಯುಕ್ತ ದೇವರ ಪಲ್ಲಕ್ಕಿ ನದಿಗೆ ಹೊಗುವ ದಾರಿಯನ್ನು ಶುಚಿಗೊಳಿಸುವ ಮೂಲಕ ಹಂಗಾರಖಂಡದ ಯುವಕರಿಂದ ಶ್ರಮದಾನ ನೆರವೇರಿತು.
ಮಾ.16 ರಂದು ದೇವರ ಪಲ್ಲಕ್ಕಿ ಉತ್ಸವ ತ್ಯಾಗಲಿ ಮತ್ತು ಹಂಗಾರಖಂಡ ಈಎರಡೂ ಗ್ರಾಮಗಳಲ್ಲಿಯೂ ನಡೆಯಲಿದ್ದು, ತ್ಯಾಗಲಿ ಮತ್ತು ಹಂಗಾರಖಂಡ ರಸ್ತೆ ಪಕ್ಕದ ಅಘನಾಶಿನಿ ನದಿಯಲ್ಲಿ ಅಮೃತ ಸ್ನಾನ ಮಾಡಬೇಕಾದ್ದರಿಂದ, ಅಲ್ಲಿ ದೇವರ ಪಲ್ಲಕ್ಕಿ ನದಿಗೆ ಹೊಗುವ ದಾರಿಯನ್ನು ಶ್ರಮಾದಾನದ ಮೂಲಕ ಹಂಗಾರಖಂಡದ ಯುವಕರಾದ, ರಮೇಶ ನಾರಾಯಣ ನಾಯ್ಕ ಬಾಳೇಕೈ, ಪ್ರಕಾಶ ಗಂಗಾಧರ ಹೆಗಡೆ , ಮೊಹನ ಡಿ ನಾಯ್ಕ, ನಟರಾಜ ಮಂಜುನಾಥ ಹೆಗಡೆ, ಮುಂತಾದವರು ಸೇರಿ ಸುವ್ಯವಸ್ಥಿತವಾಗಿ ಅಲ್ಲಿ ಕೆಲಸ ಮಾಡಿ, ತಮ್ಮಲ್ಲಿರುವಂತಹ ಸಾಮಾಜಿಕ ಕಳಕಳಿ, ದೇವರಲ್ಲಿರುವ ಭಕ್ತಿಯನ್ನು ಕಾಯಕದ ಮೂಲಕ ತೋರಿಸಿಕೊಟ್ಟಿದ್ದಾರೆ.