ಶಿರಸಿ: ಲಯನ್ಸ ಶಾಲೆಯ ಕೀರ್ತಿ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ!! ಶಾಲೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟದಲ್ಲಿ ಬಂಗಾರದ ಪದಕವನ್ನು ಪಡೆದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರೇರಣಾ ನಂದಕುಮಾರ್ ಶೇಟ್ ಬ್ಯಾಡ್ಮಿಂಟನ್ ಆಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಳೆ.
ಮಂಗಳೂರಿನ ಮಂಗಳಾ ಬಾಡ್ಮಿಂಟನ್ ಅಸೋೀಸಿಯೇಷನ್ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಬಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶಿರಸಿ ಲಯನ್ಸ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರೇರಣಾ ಶೇಟ್ ರಾಷ್ಟ್ರೀಯ ಮಹಿಳಾ ಚಾಂಪಿಯನ್, 16 ವಯೋಮಾನದೊಳಗಿನವರಲ್ಲಿ ಚಾಂಪಿಯನ್ ಹಾಗೂ 19 ವಯೋಮಾನದೊಳಗಿನವರಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾಳೆ. ಈಗಾಗಲೇ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತಳಾದ ಪ್ರೇರಣಾ ಸಾಧನೆಯ ಹಿಂದೆ ಅವರ ಪಾಲಕರ ಸಹಕಾರ ಕೂಡಾ ಸ್ಮರಣೀಯ.
ಪ್ರೇರಣಾ ಶೇಟ್ ಇವಳ ಅಮೋಘ ಸಾಧನೆಗೆ ಅವರ ಪಾಲಕರ ಸಹಕಾರಕ್ಕೆ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದ ತುಂಬು ಹೃದಯದಿಂದ ಶುಭ ಹಾರೈಸಿದೆ.