• Slide
    Slide
    Slide
    previous arrow
    next arrow
  • ಅರಣ್ಯ ಇಲಾಖೆಯ ಪರಿಸರ ವಿರೋಧಿ ನೀತಿಯ ವಿರುದ್ಧ ಸರಕಾರ ಪರಿಶೀಲನೆ ನಡೆಸಬೇಕು;ರವೀಂದ್ರ ನಾಯ್ಕ

    300x250 AD

    ಭಟ್ಕಳ: ಅರಣ್ಯ ಇಲಾಖೆಯು ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಗಿಡ ಮರ ಕಡೆದಿರುವ ಅರಣ್ಯ ಇಲಾಖೆಯ ನೀತಿ ಖಂಡನಾರ್ಹ. ಅರಣ್ಯ ಇಲಾಖೆಯ ಪರಿಸರ ವಿರೋಧಿ ನೀತಿಯ ವಿರುದ್ಧ ಸರಕಾರ ಗಂಭೀರವಾಗಿ ಪರಿಶೀಲನೆ ಮಾಡಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ಅವರು ಇಂದು ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ಕಾನಮೋದ್ಲು ಗ್ರಾಮದಲ್ಲಿ ಭಟ್ಕಳ ತಾಲೂಕಿನ ಅರಣ್ಯವಾಸಿಗಳನ್ನು ಉಳಿಸಿ-ಜಾಥಕ್ಕೆ ಚಾಲನೆ ನೀಡಿ ಮೇಲಿನಂತೆ ಮಾತನಾಡುತ್ತಿದ್ದರು.

    ಅರಣ್ಯವಾಸಿಗಳು ಅರಣ್ಯೀಕರಣಕ್ಕೆ ಪೂರಕವಾದ ಕಾರ್ಯ ಜರುಗಿಸುತ್ತಿದ್ದರೇ, ಅರಣ್ಯ ಅಧಿಕಾರಿಗಳು ಕಾಮಗಾರಿ, ಅಭೀವೃದ್ಧಿ, ಸಕಾಲದಲ್ಲಿ ನಿಸರ್ಗ ವಿಕೋಪಕ್ಕೆ ಕ್ರಮ ಜರುಗಿಸದೇ ಪರಿಸರ ಕಾರ್ಯ ಜರುಗಿಸುತ್ತಿದ್ದಾರೆ ಇದರ ವಿರುದ್ಧ ವ್ಯಾಪಕವಾಗಿ ಜನಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗುವುದೆಂದು ಅವರು ಸ್ಪಷ್ಟ ಪಡಿಸಿದರು.

    ಅರಣ್ಯವಾಸಿಗಳನ್ನು ಉಳಿಸಿ ಜಾಥವು ಅರಣ್ಯವಾಸಿಗಳಲ್ಲಿ ನೈತಿಕ ಸ್ಥೆರ್ಯ, ಕಾನೂನು ತಿಳುವಳಿಕೆ ಹಾಗೂ ಜನಜಾಗೃತಿ ಮೂಡಿಸುವಲ್ಲಿ ಯಶಶ್ವಿಯಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    300x250 AD

    ಸಂಘಟನೆಯಿಂದ ಅರಣ್ಯ ಹಕ್ಕು ಪಡೆದುಕೊಳ್ಳಲು ಸಾಧ್ಯ. ಸಂಘಟನೆಗೆ ಬಲ ತುಂಬಬೇಕು. ಅರಣ್ಯ ದೌರ್ಜನ್ಯದ ವಿರುದ್ಧ ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆ ಇರುತ್ತದೆ ಎಂದು ಹೋರಾಟಗಾರ ಇನಾಯುತ ಸಾಬಂದ್ರಿ ಹೇಳಿದರು.

    ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತವಿಕ ವೇದಿಕೆಯ ಸಂಚಾಲಕ ಪಾಂಡುರಂಗ ನಾಯ್ಕ ಬೆಳಕೆ ಮಾಡಿದರು. ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ದೇವರಾಗ ಗೊಂಡ, ಕಯುಂ ಸಾಬ, ಸವಿತಾ ಗೊಂಡ ಮಾತನಾಡಿದರು.

    ವೇದಿಕೆಯ ಮೇಲೆ ಶಬ್ಬೀರ್, ರಿಜವಾನ್ ಸಾಬ, ರಮೇಶ ನಾಯ್ಕ, ವೆಂಕಟೇಶ ವೈಧ್ಯ, ಅನಂತ ಮೋಗೆರ್, ಕಾವೇರಿ ನಾಯ್ಕ, ಭಾಸ್ಕರ ಗೊಂಡ, ಗಣೇಶ ಗೊಂಡ, ಗಣಪತಿ ಗೊಂಡ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top