
ಬನವಾಸಿ: ತಾಲೂಕಿನಲ್ಲಿ ಅಪಘಾತದಿಂದ ಗಾಯಗೊಂಡು ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಮಹಿಳೆಯರ ಚಿಕಿತ್ಸಾ ವೆಚ್ಚವನ್ನು ಹೆಬ್ಬಾರ್ ಕುಟುಂಬದ ವತಿಯಿಂದ ವೈಯುಕ್ತಿಕ ಭರಿಸುವುದಾಗಿ ಸಚಿವ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಭರವಸೆ ನೀಡಿದ್ದಾರೆ.
ಅಪಘಾತಕ್ಕೀಡಾದ ಮಮತಾ ಆರೇರ, ಶಾರದಾ ವಡ್ಡರ್, ಸರೋಜ ವಡ್ಡರ್ ರವರ ಚಿಕಿತ್ಸಾ ವೆಚ್ಚವನ್ನು ವೈಯುಕ್ತಿಕವಾಗಿ ಭರಿಸಲಾಗುವುದು. ಅಲ್ಲದೇ ನಮ್ಮ ಯಲ್ಲಾಪುರ ಮತಕ್ಷೇತ್ರದ ಬಡವರು ಯಾರೇ ಇರಲಿ ಅವರ ಸಹಾಯಕ್ಕೆ ತಮ್ಮ ಕುಟುಂಬ ಸದಾ ಸಿದ್ಧವಿರುವುದಾಗಿ ವಿವೇಕ್ ಹೆಬ್ಬಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅವರ ಈ ಕಾರ್ಯಕ್ಕೆ ಬನವಾಸಿ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.