ಶಿರಸಿ:ನಗರದ ಶ್ರೀ ಮಾರಿಕಾಂಬಾ ಜಾತ್ರೆ ನಿಮಿತ್ತ ತುರ್ತು ಪಾಲನಾ ಕೆಲಸ ಹಮ್ಮಿಕೊಂಡಿರುವುದರಿಂದ ಮಾ.7 ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ಕೆ.ಹೆಚ್.ಬಿ ಕಾಲೋನಿ, ಬಸಟ್ಟಿಕೆರೆ, ಡಿ.ಪೋ ಪ್ರದೇಶ,ವಿವೆಕಾನಂದ ನಗರ, ಫಾರೆಸ್ಟ್ ಕಾಲೋನಿ, ಸ್ಟೇಡಿಯಂ, ಕಸ್ತೂರಬಾನಗರ, ಕೈಗಾರಿಕಾ ಪ್ರದೇಶ, ಹಂಚಿನಕೇರಿ, ಖುರ್ಸೆ ಕಂಪೌಂಡ್, ಗಾಯತ್ರಿನಗರ, ಮುಳಗುಂದ ಕಾಲೋನಿ, ಶ್ರೀರಾಮ ಕಾಲೋನಿ, ಶ್ರೀನಗರ, ಚಿಪಗಿ, ನಾರಾಯಣಗುರು ನಗರ & ಇಸಳೂರು, ಗ್ರಾಮೀಣ ಶಾಖೆಯ ದೊಡ್ನಳ್ಳಿ, ಬಿಸಲಕೊಪ್ಪ ಬನವಾಸಿ ಶಾಖೆಯ ತಿಗಣಿ, ಭಾಷಿ & ಅಂಡಗಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.