• Slide
    Slide
    Slide
    previous arrow
    next arrow
  • ವಿಶ್ವದರ್ಶನ ಶಾಲೆಯಲ್ಲಿ ಗಮನ ಸೆಳೆದ ವಿವಿಧ ವಿಜ್ಞಾನದ ಮಾದರಿಗಳು

    300x250 AD

    ಯಲ್ಲಾಪುರ:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ವಿಜ್ಞಾನ ಪ್ರದರ್ಶನ ಹಾಗೂ ಸ್ಪರ್ಧೆ ನೋಡುಗರ ಗಮನ ಸೆಳೆಯಿತು.

     ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ 90ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.

    ಚಂದ್ರಯಾನ, ರಾಕೇಟ್ ನ ಮಾದರಿ, ವಿದ್ಯುತ್ ಶಕ್ತಿಯಾಗಿ ಬದಲಾಗುವ ಚಲನ ಶಕ್ತಿ, ಜ್ವಾಲಾಮುಖಿ ಮಾದರಿ, ವಕ್ರಿಭವನ ಮೊದಲಾದ ಮಾದರಿಗಳು ನಿರ್ಣಾಯಕರ ಮೆಚ್ಚುಗೆ ಪಡೆದವು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಮಾದರಿಗಳನ್ನು ಪರಿಶೀಲಿಸಿದರು.

    300x250 AD

    ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ನಿತೇಶ್ ತೊರಕೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಗೀತಾ ಎಚ್.ವಿ, ಲತಾ ಗೆರಗದ್ದೆ ನಿರ್ಣಾಯಕರಾಗಿ ಭಾಗವಹಿಸಿದ್ದರು. ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ನ ಪ್ರಾಚಾರ್ಯರಾದ ಗಣೇಶ ಭಟ್ಟ, ಉಪ ಪ್ರಾಚಾರ್ಯರಾದ ಆಸ್ಮಾ ಶೇಖ್ ಭಾಗವಹಿಸಿದ್ದರು. ವನಿತಾ ಭಾಗ್ವತ ಹಾಗೂ ಕಾವ್ಯ ಹೆಗಡೆ ಸಂಘಟಿಸಿದ್ದರು. ತಬಸ್ಸುಮ್ ಶೇಖ ನಿರ್ವಹಿಸಿದರು. ಕೃಷ್ಣಭಟ್ ರವರು ಎಲ್ಲರನ್ನೂ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top