ಶಿರಸಿ:ಆತ್ಮ ಯೋಜನೆ ಅಡಿಯಲ್ಲಿ ತೋಟಗಾರಿಕಾ ಇಲಾಖೆ ಶಿರಸಿ, ಪರ್ಣ ಪಶ್ಚಿಮ ಘಟ್ಟ ರೈತೋತ್ಪಾದಕ ಕಂಪನಿ, ವಾನಳ್ಳಿ ಲೈಪ್ ಟ್ರಸ್ಟ್ (ರಿ.) ಶಿರಸಿ, ಐ.ಎಫ್.ಎಚ್.ಡಿ., ಬೆಂಗಳೂರು ಸ್ನೇಹಕುಂಜ ಕಾಸರಗೋಡ, ಸದ್ಭಾವನಾ ಸೇವಾ ಸಂಸ್ಥೆ (ಲ.) ಶಿರಸಿ, ನಮ್ಮಲ್ಲಿ ಪ್ರತಿಷ್ಠಾನ (ರಿ.) ದಾಸನಕೊಪ್ಪ, ಶ್ರೀಗುರು ಅಯ್ಯಪ್ಪ ಸಾಂಸ್ಕೃತಿಕ ಸಂಘ (ಲ.) ಕಂಗ್ರೇಮಠ ಇವರ ಸಂಯುಕ್ತ ಆಶ್ರಯದಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಹಾರ ತಯಾರಿಕೆ, ಸಂಸ್ಕರಣೆ, ವೈವಿದ್ಯತೆ, ಮೌಲ್ಯ ವರ್ಧನೆ ಮತ್ತು ಸಹಭಾಗಿತ್ವ ಕುರಿತು ಮಾಹಿತಿ ಕಾರ್ಯಾಗಾರವನ್ನು ಮಾ.8 ರ ಮಂಗಳವಾರ ಬೆಳಿಗ್ಗೆ 10-30 ರಿಂದ ಜಾಜಿಗುಡ್ಡೆಯ (ವಾನಳ್ಳಿ) ತವರು ಮನೆ ಹೋಂ ಸ್ಟೇ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಶಾಂತಿ ನಾಯಕ, ಹೊನ್ನಾವರ ಆಗಮಿಸಲಿದ್ದು, ಗ್ರಾಮ ಪಂಚಾಯತ್ ಸದಸ್ಯ ಸತ್ಯನಾರಾಯಣ ಕೃಷ್ಣ ಹೆಗಡೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಸಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹಾಗೂ ಪರಿಸರ ತಜ್ಞರಾದ ನರಸಿಂಹ ಹೆಗಡೆ ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಜಿ. ಎಸ್. ಸೋಮಶೇಖರ,
ಡಾ. ದಿನೇಶ ಗುಪ್ತಾ, ಡಾ. ನವಾ ಉದಯ,ಡಾ. ರವಿಕಿರಣ ಪಟವರ್ಧನ ಇವರು ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಮಧ್ಯಾಹ್ನ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.