ಶಿರಸಿ:ತಾಲೂಕಿನ ಹುಲೇಕಲ್ ಸಮೂಹ ಸಂಪನ್ಮೂಲ ಕೇಂದ್ರದ ಎಲ್ಲಾ ಶಾಲೆಗಳು ವಿವಿಧ ತಂರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆಗೆ ಒಳಪಟ್ಟು ರಾಜ್ಯದಲ್ಲಿಯೇ “ಸ್ಮಾರ್ಟ ಕ್ಲಸ್ಟರ್”ಎಂದು ಘೋಷಿಸಲಾಯಿತು.
ಇಂದು ನಡೆದ ‘ಇ-ಕ್ಲಸ್ಟರಿ’ನ ಶೈಕ್ಷಣಿಕ ಬಾಗೀದಾರರ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಪಿ ಬಸವರಾಜ, ಜಿಲ್ಲಾ ಸಮಗ್ರ ಶಿಕ್ಷಣದ ಅಧಿಕಾರಿ ಸಿ ಎಸ್ ನಾಯ್ಕ, ಜಿಲ್ಲಾ ಗುಣಮಟ್ಟ ಶಿಕ್ಷಣ ಡಿ ವಾಯ್ ಪಿ ಸಿ ಗಳಾದ ವೆಂಕಟೇಶ ಪಟಗಾರ,ಶಿರಸಿ ಕ್ಷೇತ್ರಶಿಕ್ಷಣಾಧಿಕಾರಿ ಎಮ್,ಎಸ್,ಹೆಗಡೆ . ಹುಲೇಕಲ್ ಶಾಲಾ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ, ಗ್ರಾ ಪಂ ಸದಸ್ಯೆ ಫೌಜಿಯಾ, ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಡಿ.ಪಿ.ಹೆಗಡೆ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ ಉಪಸ್ಥಿತರಿದ್ದರು.
ಜ್ಯೋತಿ ಬೆಳಗಿಸಿ ಮತ್ತು ವೇದಿಕೆಯಲ್ಲಿ ಸಿದ್ಧಪಡಿಸಿದ ಅಕ್ಷರ ತೇರನ್ನು ಎಳೆದು, ಉದ್ಘಾಟನಾ ಮಾತುಗಳನ್ನಾಡಿದ ಡಿಡಿಪಿಐ ಪಿ ಬವರಾಜ ಭವಿಷ್ಯದ ಶೈಕ್ಷಣಿಕ ಕಾರ್ಯತಂತ್ರಗಳಿಗೆ ಇ-ಕಲಿಕೆ ಅತೀಅವಶ್ಯವಾಗಿದ್ದು, ಅದನ್ನು ಹುಲೇಕಲ್ ಕ್ಲಸ್ಟರ್ ಮೊದಲಿಗೆ ಸಾಧನೆಮಾಡಿ, “ನನ್ನ ಶಾಲೆಗೆ ನನ್ನದೊಂದು ರೂಪಾಯಿ” ಯೋಜನೆ ಮೂಲಕ ಜಿಲ್ಲೆಯ ಶ್ಯೆಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನಡಿ ಬರೆದಿದ್ದು, ಇಲಾಖೆ ಜೊತೆ ಸಮುದಾಯ ಎಲ್ಲಾ ರೀತಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಅಭಿನಂದನೀಯ ಎಂದುತಿಳಿಸಿದರು. ಕ್ಲಸ್ಟರಿನ ಸಾಧನೆಯನ್ನು ಕೊಂಡಾಡುತ್ತ ಇದು ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿ ಎಂದು ತಿಳಿಸಿದರು.
ಕ್ಲಸ್ಟರಿನ ಇ-ಕಲಿಕಾ ಸಾಧನಾ ಪಥದ ಸಂಚಿಕೆ “ಅಕ್ಷರ ತೇರು” ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಸಮಗ್ರಶಿಕ್ಷಣ ಅಭಿಯಾನದ ಅಧಿಕಾರಿ ಸಿ ಎಸ್ ನಾಯ್ಕ, ಶ್ಯೆಕ್ಷಣಿಕ ಕಾರ್ಯಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ವಿಶೇಷ ಸಾಧನೆ ಮಾಡುತ್ತಿರುವ ಹುಲೇಕಲ್ ಕ್ಲಸ್ಟರಿನ ಎಲ್ಲಾ ಶಾಲೆಗಳ ಸಮಿತಿಯ ಮತ್ತು ಶಿಕ್ಷಕರಿಗೆ ಅಭಿನಂದಿಸುತ್ತ, ಶ್ಯೆಕ್ಷಣಿಕ ಚಟುವಟಿಕೆಗಳು ಬದಲಾವಣೆಯ ಸವಾಲುಗಳನ್ನು ಎದುರಿಸುತ್ತ ಗುಣಾತ್ಮಕವಾಗಿ ಮಕ್ಕಳಿಗೆ ತಲುಪಲು ಇಲಾಖೆ ಜೊತೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯ,ಇದಕ್ಕೆ ಹುಲೇಕಲ್ ಕ್ಲಸ್ಟರ್ ಮಾದರಿ, ಪೌಷ್ಠಿಕ ಆಹಾರಕ್ಕಾಗಿ “ತರಕಾರಿ ಬುಟ್ಟಿ” ಯೋಜನೆ ಮೂಲಕ ಇಲ್ಲಿನ ಸಿ ಆರ್ ಪಿ, ಮತ್ತು ಶಿಕ್ಷಕರು,ಸಮಿತಿಯವರ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಬಿಇಓ ಎಮ್ ಎಸ್ ಹೆಗಡೆ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಸರಕಾರೀ ಶಾಲೆಯಲ್ಲಿ ಕಲಿತ ಮಕ್ಕಳು ಸ್ವಚ್ಛ ಸುಂದರ, ಸ್ವಾಭಾವಿಕ ಪರಿಸರದಲ್ಲಿ ಶಿಕ್ಷಣ ಪಡೆದು ಪ್ರಾಮಾಣಿಕ ನಾಗರಿಕರಾಗಿ, ದೇಶದ ಆಸ್ತಿಯಾಗುತ್ತಿದ್ದು,ಅವರಿಗೆ ತಂತ್ರಜ್ಞಾನದ ಕೌಶಲ್ಯ ಅಗತ್ಯವಾಗಿದ್ದು, ಹುಲೇಕಲ್ ಕ್ಲಸ್ಟರ್ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಪಾಲ್ಗೊಳ್ಳುವಿಕೆ,ಶಿಕ್ಷಕರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಸಿ.ಆರ್.ಪಿ ಡಿ.ಪಿ.ಹೆಗಡೆ ಕ್ಲಸ್ಟರಿನ ಸಾಧನಾ ಪಥ ಅಕ್ಷರ ತೇರಿನ ಯಶೋಗಾಥೆ ಮಂಡಿಸಿದರು. ಹಾರೇಪಾಲ ಹಾಗೂ ದೇವರಕೊಪ್ಪ ಮತ್ತು ಹುಲೇಕಲ್ ಶಾಲಾ ಅಧ್ಯಕ್ಷರುಗಳು ತಮ್ಮ ಶಾಲೆಗಳ ವೈವಿಧ್ಯಮಯ ಕಾರ್ಯಚಟುವಟಿಕೆ ವಿವರಿಸಿದರು.
ವೇದಿಕೆಯಲ್ಲಿ ಇ-ಕಲಿಕೆಯಲ್ಲಿ ಸಾಧನೆ ಮಾಡಿದ ಶಿಕ್ಷಕ/ಕಿಯರನ್ನು,ಶಾಲಾ ಸಮಿತಿಯವರನ್ನುವೇದಿಕೆ ಮೇಲಿನ ಗಣ್ಯರಿಂದ ಅಭಿನಂದಿಸಿ ಗೌರವಿಸಲಾಯಿತು.
ಹುಲೇಕಲ್ ಶಾಲಾ ಶಿಕ್ಷಕಿಯರಾದ ಕಲಾವತಿ ಹೆಗಡೆ ಮತ್ತು ಸುನಂದಾ ಹೆಗಡೆ ಕಾರ್ಯಕ್ರಮ ನಿರೂಪಸಿದರು.ವಡ್ಡಿನಗದ್ದೆ ಶಾಲಾ ಮುಖ್ಯಶಿಕ್ಷಕಿ ಚೇತನಾ ಕಾಮತ ಕೊನೆಯಲ್ಲಿ ವಂದಿಸಿದರು. ಅಚ್ಚುಕಟ್ಟಾದ ಕಾರ್ಯಕ್ರಮ ಇಲಾಖೆಯ ಮಟ್ಟದಲ್ಲಿ ಒಂದು ಮೈಲುಗಲ್ಲಾಗಿ ಅನೇಕ ಮುಂದಿನ ಕಾರ್ಯಚಟುವಟಿಕೆಗಳಿಗೆ ಮುನ್ನುಡಿಯ ಭಾಷ್ಯ ಬರೆಯಲಾಯಿತು.
ಹುಲೇಕಲ್ ಕ್ಲಸ್ಟರಿನ 10 ಅಂಶಗಳ ಸಾಧನಾ ಪಥದ ಹೆಜ್ಜೆಗಳು
- “ನನ್ನ ಮಗು, ನನ್ನ ಸುರಕ್ಷೆ” ದೃಷ್ಠಿಕೋನದಿಂದ ಸಂಪೂರ್ಣಆರೋಗ್ಯ ಸುರಕ್ಷತೆ.
- ಮಕ್ಕಳು ಮತ್ತು ಪಾಲಕರಿಗೆ, ಕೋವಿಡ್– 19 ಬಗೆಗಿನ ಆತ್ಮಸ್ಥೈರ್ಯ ಮೂಡಿಸುವುದು.
- “ಕ್ರಿಯಾಶೀಲ ಆಡಳಿತ“Àದ ಅಡಿಯಲ್ಲಿ ಶಾಲಾ ಸರ್ವಾಂಗೀಣ ಸೌಂದರ್ಯಕ್ಕೆ ಸಮುದಾಯ ಒಳಗೊಳ್ಳುವುದು.
- ಆಂಗಿಕ ಚಟುವಟಿಕೆಗಳು ಮತ್ತು ಕೃತಿಸಂಪುಟಗಳ ಮೂಲಕ ಗರಿಷ್ಠ ಶೈಕ್ಷಣಿಕ ಸಾಮಥ್ರ್ಯಗಳ ಸರ್ವಾಂಗೀಣ ಬಲವರ್ಧನೆ.
- “ಆರ್ಥಿಕ ಸಬಲೀಕರಣದತ್ತ ಸರಕಾರೀ ಶಾಲೆಗಳು” ಈ ಕನಸನ್ನು ಸಾಧಿಸುವುದು.
(“ನನ್ನ ಶಾಲೆಗೆ ನನ್ನದೊಂದು ರೂಪಾಯಿ”. ತರಕಾರಿ ಬುಟ್ಟಿ ಯೋಜನೆ, ಶಾಲಾ ಪೌಷ್ಠಿಕ ವನ
“ನನ್ನ ಶಾಲೆ, ನನ್ನ ಕಾರ್ಯಕ್ರಮ”. “ನನ್ನ ಶಾಲೆ, ನನ್ನಕೊಡುಗೆ”. ಇತ್ಯಾದಿ) - ಶಾಲಾವಾರು / ತರಗತಿವಾರು ಮಕ್ಕಳು ಮತ್ತು ಶಿಕ್ಷಕರ ಆನ್ ಲೈನ್ ಕಲಿಕಾ ಗ್ರೂಪ್ ವ್ಯವಸ್ಥೆ.
- “ಇ-ಗ್ರಂಥಾಲಯ”ದ ಮತ್ತು ಕ್ಲಸ್ಟರ್ ವೆಬ್ ಸೈಟ್ ಮೂಲಕ ವಿವಿಧ ಆಯಾಮಗಳಿಂದ ಶೈಕ್ಷಣಿಕ ಸಂಪನ್ಮೂಲದ ಉದ್ದೀಪನ.
- ಇಲಾಖಾ ತರಬೇತಿಗಳ ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ.
- “ಇ-ಆಡಳಿತ “ ದ ತಂತ್ರಾಂಶಗಳ ಬಳಕೆ ಮೂಲಕ ಪಾರದರ್ಶಕತೆ ಮತ್ತು ತ್ವರಿತ ಸೇವೆ.
- ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ವಿಶೇಷ ತರಬೇತಿ ಮತ್ತು ನುರಿತ ವೃತ್ತಿಪರರಿಂದ ಕೂಡಿದ ಸಂಪನ್ಮೂಲ ತಂಡ ರಚನೆ, ತನ್ಮೂಲಕ ಶೈಕ್ಷಣಿಕ ಸಂಪನ್ಮೂಲದ ಕ್ರೊಢೀಕರಣಕ್ಕೆ ಆದ್ಯತೆ.