Slide
Slide
Slide
previous arrow
next arrow

ದೇಶದಲ್ಲಿಇದುವರೆಗೆ 2 ಕೋಟಿಗೂ ಅಧಿಕ ಬೂಸ್ಟರ್ ಡೋಸ್‌ ನೀಡಿಕೆ

300x250 AD

ನವದೆಹಲಿ:  ಇದುವರೆಗೆ ದೇಶದಲ್ಲಿ 2 ಕೋಟಿಗೂ ಅಧಿಕ ಬೂಸ್ಟರ್ ಡೋಸ್‌ಗಳನ್ನು ಅಥವಾ ಮೂರನೇ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ.

“2 ಕೋಟಿಗೂ ಹೆಚ್ಚು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ಬೂಸ್ಟರ್‌ ಡೋಸ್‌ ಅನ್ನು ಸ್ವೀಕರಿಸಿದ್ದಾರೆ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಅರ್ಹ ಫಲಾನುಭವಿಗಳು ಮೂರನೇ ಡೋಸ್‌ ಅನ್ನು ಶೀಘ್ರವಾಗಿ ಪಡೆಯುವಂತೆ ಅವರು ವಿನಂತಿಸಿದ್ದಾರೆ.

ದೇಶದ ವಯಸ್ಕ ಜನಸಂಖ್ಯೆಯ ಶೇಕಡಾ 97 ಕ್ಕಿಂತ ಹೆಚ್ಚು ಜನರು ತಮ್ಮ ಮೊದಲ ಡೋಸ್  ಲಸಿಕೆಯನ್ನು ಪಡೆದಿದ್ದಾರೆ.

300x250 AD

ದೇಶವು ಇಂದು ಬೆಳಿಗ್ಗೆನವರೆಗೆ 2,03,69,898 ಬೂಸ್ಟರ್‌ ಡೋಸ್ ನೀಡಿದೆ. ಕಳೆದ 24 ಗಂಟೆಗಳಲ್ಲಿ 24.84 ಲಕ್ಷ ಡೋಸ್‌ಗಳ ನೀಡಿಕೆಯೊಂದಿಗೆ ಲಸಿಕಾ ವ್ಯಾಪ್ತಿ 178.29 ಕೋಟಿ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 6,396 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

Share This
300x250 AD
300x250 AD
300x250 AD
Back to top