ಯಲ್ಲಾಪುರ:ಸೀತಾರಾಮ ಸಂಜೀವಿನಿ ಮಹಿಳಾ ಒಕ್ಕೂಟ ಇವರಿಂದ ಇಡಗುಂದಿ ಆರೋಗ್ಯ ಘಟಕಕ್ಕೆ ಇಸಿಜಿ ಮಶಿನ್ ಹಸ್ತಾಂತರ ಕಾರ್ಯಕ್ರಮ ಮಾ.೫ ರಂದು ಬೆಳಿಗ್ಗೆ ೧೦.೩೦ ಕ್ಕೆ ತಾಲೂಕಿನ ಇಡಗುಂದಿಯ ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ.
ವನಚೇತನ ಸಹ್ಯಾದ್ರಿ ಸಂಚಯ ಮಂಗಳೂರು ಇವರು ಇಡಗುಂದಿಯ ಸೀತಾರಾಮ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಇಸಿಜಿ ಯಂತ್ರ ನೀಡಿದ್ದು,ಸ್ಥಳಿಯ ಮಹಿಳಾ ಒಕ್ಕೂಟದ ವತಿಯಿಂದ ಇಡಗುಂದಿ ಆರೋಗ್ಯಕೇಂದ್ರಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಸಿದ್ದಿ ಹೇಳಿದರು.
ಅವರು ಶುಕ್ರವಾರ ಈ ಕುರಿತು ಮಾಹಿತಿ ನೀಡಿ,ಸಚಿವ ಶಿವರಾಮ ಹೆಬ್ಬಾರ,ಎಂಎಲ್ಸಿ ಶಾಂತಾರಾಮ ಸಿದ್ದಿ,ತಾ.ಪಂ ಇಒ ಜಗದೀಶ ಕಮ್ಮಾರ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಹ್ಯಾದ್ರಿ ಸಂಚಯದ ದಿನೇಶ ಹೊಳ್ಳ,ಪ್ರಮುಖರಾದ ಅನಂತ ಸಿದ್ದಿ,ನಾಗರಾಜ ಪದವಿನಂಗಡಿ ಇದ್ದರು.