
ಸಿದ್ದಾಪುರ: ಪಟ್ಟಣದ ರವೀಂದ್ರನಗರದ ಮನೆಯೊಂದರಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ರವೀಂದ್ರನಗರ ನಿವಾಸಿ ಮೋಹನ್ ನಾಯರ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಸಫ಼ಲರಾಗಿದ್ದಾರೆ.
ಘಟನೆಯಲ್ಲಿ ಮನೆಯ ವಸ್ತುಗಳಾದ ಪುಸ್ತಕಗಳು ಬಟ್ಟೆ ಒಡವೆಗಳು ಹಾಗೂ ದಿನಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಮಾಸ್ತೇಗೊಂಡ, ಚಂದ್ರಾನಾಯ್ಕ್, ನಾಗರಾಜ್ ಮೂಲೇಮನೆ,ಪ್ರಸಾದ್ ನಾಯ್ಕ್ ಮುಂತಾದವರು ಪಾಲ್ಗೊಂಡಿದ್ದರು.