ಶಿರಸಿ:ಸುಪ್ರೀಂ ಕೋರ್ಟ್ ನಲ್ಲಿನ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯವಾಸಿಗಳ ವಿರುದ್ಧ ವ್ಯತಿರಿಕ್ತವಾದ ಆದೇಶ ಬಾರದ ರೀತಿಯಲ್ಲಿ ತೀವ್ರ ನಿಗಾವಹಿಸುವುದು ಅತೀ ಅವಶ್ಯ ಹಾಗೂ ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಸರಕಾರದ ಕ್ರಮ ಅಗತ್ಯ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆನರಾ ಕ್ಷೇತ್ರದ ಸಂಸದೆ ಆಗಿರುವ ಸಂದರ್ಭದಲ್ಲಿ ಲೋಕಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನಕ್ಕೆ ತಂದಿದ್ದೆ. ನಂತರ, ಅರಣ್ಯ ಹಕ್ಕು ಕಾಯಿದೆ ಜಾರಿಗೆ ತರುವ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರೊಂದಿಗೆ ಸಮಾಲೋಚಿಸಿದ ವಿಷಯವನ್ನು ವಿಶ್ಲೇಷಿಸಿದರು. ಇಂದಿಗೂ ಈ ಕಾಯಿದೆ ಮೂಲಕ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಿರುವುದು ವಿಷಾದಕರ ಎಂದು ತಿಳಿಸಿದರು.