
ಶಿರಸಿ: ಭೈರುಂಬೆ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಹಾಗೂ ಮಜರೆಗಳ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡುವ ಕುರಿತು ಅನೇಕ ರೈತರು ಪಂಚಾಯತಕ್ಕೆ ಮನವಿ ಸಲ್ಲಿಸಿರುತ್ತಾರೆ.
ಕಾರಣ ದನಕರಗಳನ್ನು ಸಾಕಿದ ಮಾಲೀಕರಿಗೆ ಪಂಚಾಯತ ವ್ಯಾಪ್ತಿ ಮಾಲೀಕರಿಗೆ ತಿಳಿಯ ಪಡಿಸುವುದೇನೆಂದರೆ ತಮ್ಮ ತಮ್ಮ ದನಕರುಗಳನ್ನು ತಮ್ಮ ಸುಪರ್ದಿಯಲ್ಲಿಯೇ ಸಾಕಬೇಕು, ಸಾರ್ವಜನಿಕರ ಬೆಳೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳತಕ್ಕದ್ದು, ಒಂದು ವಾರದೊಳಗಾಗಿ ಈ ಬಗ್ಗೆ ಸೂಕ್ತ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕರ್ನಾಟಕ ಪಂಚಾಯತರಾಜ್ ಅಧಿನಿಯಮದಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಮುಂದಾಗುವ ಹಾನಿ ಹಾಗೂ ತೊಂದರೆಗಳಿಗೆ ನೀವೆ ಹೊಣೆಗಾರರಾಗುವಿರಿ ಎಂದು ಭೈರುಂಬೆ ಗ್ರಾಮ ಪಂಚಾಯತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.