ದಾಂಡೇಲಿ:ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆ ಭಾಗಕ್ಕೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿರಂಪಾಲಿಯ ಅಕೋರ್ಡಾ ಎಂಬಲ್ಲಿ ನಡೆದಿದೆ.
ಛತ್ತೀಸ್ಗಡದ ಯುವತಿ ದೇವಿಕಾ ಸಂಜಯ್ ದಾಸವಾಣಿ ಮೃತಪಟ್ಟಿದ್ದಾಳೆ.
ರಜಾ ಕಾರಣದಿಂದ ಧಾರವಾಡದಿಂದ ದಾಂಡೇಲಿ ಪ್ರವಾಸಕ್ಕೆ ಆಗಮಿಸಿ, ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜೊತೆ ತಂಗಿದ್ದ ಮೆಡಿಕಲ್ ವಿದ್ಯಾರ್ಥಿ ದೇವಿಕಾ ಧಾರವಾಡ ಸೆಮಿನಾರ್‌ಗೆ ಬಂದಿದ್ದಳು ದುರಾದೃಷ್ಟವೆಂಬಂತೆ ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.