ಯಲ್ಲಾಪುರ:ತಾಲೂಕಿನ ಕವಾಳೆಯಲ್ಲಿ ನಾರಾಯಣ ಭಾಗ್ವತ ಅವರ ಸ್ಮರಣಾರ್ಥ ಬುಧವಾರ ರಾತ್ರಿ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ಮಾನಿಷಾದ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಭಟ್ಟ ಅಚವೆ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ಮಹಾಬಲೇಶ್ವರ ನಾಯಕನಕೆರೆ, ಮಂಜುನಾಥ ಭಾಗ್ವತ ಕವಾಳೆ ಭಾಗವಹಿಸಿದ್ದರು.
ರಾಮನಾಗಿ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ, ಲಕ್ಷ್ಮಣನಾಗಿ ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಸೀತೆಯಾಗಿ ಸದಾಶಿವ ಮಲವಳ್ಳಿ, ವಾಲ್ಮೀಕಿಯಾಗಿ ಮಂಜುನಾಥ ಹೆಗಡೆ ಹಿಲ್ಲೂರು, ಲವನಾಗಿ ವೆಂಕಟ್ರಮಣ ಭಾಗ್ವತ ಕವಾಳೆ, ಊರ್ಮಿಳೆ ಹಾಗೂ ಕುಶನಾಗಿ ದೀಪಕ ಭಟ್ಟ ಕುಂಕಿ, ಭದ್ರನಾಗಿ ಶ್ರೀಧರ ಅಣಲಗಾರ ಪಾತ್ರ ನಿರ್ವಹಿಸಿದರು.