ಯಲ್ಲಾಪುರ:ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಯಲ್ಲಾಪುರ ಮತ್ತು ಕಲ್ಲೇಶ್ವರ ಶಾಖೆಯಿಂದ ನಾಟ್ಯಲಹರಿ ಮಾ ೫ ರಂದು ಶನಿವಾರ ಸಂಜೆ ೫ ಗಂಟೆಯಿಂದ ವೆಂಕಟ್ರಮಣ ಮಠದ ವೇದ ವ್ಯಾಸ ಕಲ್ಯಾಣಮಂಟಪ ದ ಆವಾರದಲ್ಲಿ ಹಮ್ಮಿಕೊಂಡಿದೆ.
೫ ಗಂಟೆಗೆ ಭರತನಾಟ್ಯ ಚೌಕಟ್ಟಿನ ನೃತ್ಯ ಬಂಧಗಳ ಪ್ರದರ್ಶನ,ಹಾಗೂ ಡಾ.ಸಹನಾ ಭಟ್ಟ ಅವರಿಂದ ಶ್ರೀಕೃಷ್ಣಾಷ್ಟಕಂ ನೃತ್ಯ ಪ್ರದರ್ಶನಗೊಳ್ಳಲಿದೆ.
೬ ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯಮಿ ಶ್ರೀನಿವಾಸ ಭಟ್ಟ, ಪತ್ರಕರ್ತ ನರಸಿಂಹ ಸಾತೊಡ್ಡಿ,ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ,ನಿರ್ದೇಶಕಿ ಡಾ ಸಹನಾ ಭಟ್ಟ,ಉಪಸ್ಥಿತರಿರುವರು.
ಸಂಜೆ ೬.೩೦ ರಿಂದ ವೀರ ಅಭಿಮನ್ಯು ವಿಶೇಷ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ನೃತ್ಯ ಕಲಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.