ಯಲ್ಲಾಪುರ:ತಾಲೂಕಿನ ಹುತ್ಕಂಡದ ಹನುಮಂತಕೊಪ್ಪದ ಹನುಮಂತದೇವ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ೨೦ ನೇ ವರ್ಧಂತಿ ಉತ್ಸವ ಮಾ.4 ರಂದು ಶುಕ್ರವಾರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಗಣಹವನ, ಉಪನಿಷತ್ ಪಾರಾಯಣ,ಪುರುಷಸೂಕ್ತ ಪಾರಾಯಣ, ರುದ್ರಾಭಿಷೇಕ ಮುಂತದ ದೇವತಾ ವಿನಿಯೊಗಗಳು ನಡೆಯಲಿದೆ. ಮದ್ಯಾಹ್ನ ಪ್ರಸಾದ ವಿತರಣೆ ಹಾಗೂ ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ.
ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಫಲಾವಳಿಗಳ ಸವಾಲು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.