ಯಲ್ಲಾಪುರ:ಸಮಾಜದಲ್ಲಿ ಆರ್ಥಿಕವಾಗಿ,ಶೈಕ್ಷಣಿಕವಾಗಿ ದುರ್ಬಲವಾಗಿರುವ ಸಿದ್ದಿ ಸಮುದಾಯದ ಏಳಿಗೆಗೆ ಎಲ್ಲರೂ ಒಟ್ಟಾಗಿ ಶೃಮಿಸ ಬೇಕೆಂದು ಸಿದ್ದಿ ಸಮಾಜದ ಮುಖಂಡ ಬೆನಿತ್ ಸಿದ್ದಿ ಹೇಳಿದರು.
ಅವರು ಗುರುವಾರ ತಾಲೂಕಿನ ಹಾಸಣಗಿ ಗ್ರಾ.ಪಂ.ವ್ಯಾಪ್ತಿಯ ಬಾಚನಳ್ಳಿಯಲ್ಲಿ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಬಾಚನಳ್ಳಿ ಗ್ರಾಮೀಣ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಹಿಂದುಳಿದ ಸಮುದಾಯದವರು ಹಿಂಜರಿಕೆ ಬಿಟ್ಟು,ಸಮುದಾಯದ ಒಳಿತಿಗೆ ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು.ಸಂಘಟನೆಯಿಂದ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸ್ಥಳಿಯ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ರಾಮಚಂದ್ರ ಸುಬ್ರಹ್ಮಣ್ಯ ಸಿದ್ದಿ ಉಪಾಧ್ಯಕ್ಷರಾಗಿ ಪ್ರೇಮಾ ಗಣಪತಿ ಸಿದ್ದಿ,ಕಾರ್ಯದರ್ಶಿಯಾಗಿ ನಾಗೇಂದ್ರ ತಿಮ್ಮಾ ಸಿದ್ದಿ,ಖಜಾಂಚಿಯಾಗಿ ಸದಾನಂದ ನಾಗೇಶ ಸಿದ್ದಿ ಅವರನ್ನು ನೇಮಕಮಾಡಿ ಸಂಘಟನೆಯ ಜವಬ್ದಾರಿ ನೀಡಲಾಯಿತು.
ಸಂಘಟನೆಯ ಪ್ರಮುಖರಾದ ಪ್ರಭಾಕರ ಸಿದ್ದಿ ಸ್ವಾಗತಿಸಿದರು.ಜುಲಿಯನ್ ಸುಪ್ರೀಯಾ ಸಿದ್ದಿ ನಿರೂಪಿಸಿದರು.ಸಂತೋಷ ಬಿಳ್ಕಿಕರ,ಸಿದ್ದಿ ಬುಡಕಟ್ಟು ಸಮುದಾಯದ ರಾಜ್ಯ ಉಪಾಧ್ಯಕ್ಷ ಶೇಖರ ಸಿದ್ದಿ ಸಂಘಟನೆಯ ಮಹತ್ವ,ಅಗತ್ಯತೆಯ ಕುರಿತು ಮಾತನಾಡಿದರು.ವಿಷ್ಣು ಸಿದ್ದಿ ವಂದಿಸಿದರು.