ಶಿರಸಿ: ರಮ್ಯವಾದ ಪ್ರಕೃತಿಯ ಮಡಿಲಿನಲ್ಲಿ ಉದಯಿಸಿ, ಘನ ಸಂಸ್ಕೃತಿಯ ಅಡಿಪಾಯದಿಂದ ಸುಭದ್ರವಾಗಿ ನೆಲೆನಿಂತು ಹತ್ತು ಹಲವು ಸಾಧನೆಗಳಿಗೆ ಸಾಕ್ಷಿಯಾಗಿ ಸಾರ್ಥಕ ಎಪ್ಪತ್ತೈದು ವಸಂತಗಳನ್ನು ಪೂರೈಯಿಸಿರುವ ಅಮೃತಮಯವಾದ ಕಾನಮುಸ್ಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿದೆ.
ಮುಂದಿನ ತಲೆಮಾರಿನ ಮಕ್ಕಳಿಗೆ ಊರಿನಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕೆಂಬ ಮಹತ್ವಾಕಾಂಕ್ಷೆಯ ಕನಸನನ್ನು ಇರಿಸಿಕೊಂಡಿದ್ದ ಊರಿನ ಹಿರಿಯರಾದ ದಿ. ಮಹಾಭಲೇಶ್ವರ ಹೆಗಡೆ ಕಾನಮುಸ್ಕಿ ದಿ. ನಾರಾಯಣ ಭಟ್ ಅಸ್ತಾಳ ಹಾಗೂ ದಿ. ಸುಬ್ರಾಯ ಹೆಗಡೆ ಕೋಟಿಕೊಪ್ಪ ಅವರುಗಳ ನಿರಂತರವಾದ ಅವಿರತ ಪರಿಶ್ರಮದ ಫಲವಾಗಿ 1946 ಮಾರ್ಚ 26 ರಂದು ಕಾನಮುಸ್ಕಿ ಶಾಲೆ ಸ್ಥಾಪನೆಯಾಗಿ ಜ್ಞಾನದ ಜ್ಯೋತಿ ಬೆಳಗಲಾರಂಭಿಸಿತು. ಆರಂಭದಿಂದ ಇಂದಿನವರೆಗೆ ಅನೇಕ ಏಳು ಬೀಳುಗಳನ್ನು ಎದುರಿಸಿ ಈ ಶಾಲೆಯಲ್ಲಿ ವಿದ್ಯೆಯನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಧನೆಗಳಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಉತ್ತುಂಗದ ಶಿಖರವನ್ನೆರಿದೆ.
ಸ್ವಾತಂತ್ರಪೂರ್ವದಲ್ಲಿಯೇ ಪ್ರಾರಂಭವಾದ ಈ ಶಾಲೆಯಲ್ಲಿ ಈವರೆಗೆ 306 ವಿದ್ಯಾರ್ಥಿಗಳು ಶಿಕ್ಷಣ ಪಡೆದು ಅವರಲ್ಲಿ ಅನೇಕರು ಪ್ರಗತಿಪರ ಕೃಷಿಕರು, ಖ್ಯಾತ ವೈದ್ಯರು, ಕೃಷಿ ತಜ್ಞ ವಿಜ್ಞಾನಿಗಳು, ಉದ್ಯಮಿಗಳು, ಸಹಕಾರಿಗಳು, ಸಂಗೀತಗಾರರು, ವಿದ್ವಾಂಸರು ಹಾಗೂ ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಾ ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಾ ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಣಾಲಯಕ್ಕೆ ಕೃಜತ್ಞಾಪೂರ್ವಕವಾಗಿ ಅನೇಕ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಸರಕಾರದಿಂದ ನಿಯುಕ್ತಿಗೊಂಡ ಹಾಗೂ ಸ್ಥಳೀಯರು ಸೇರಿ 30 ಶಿಕ್ಷಕ ಶಿಕ್ಷಕಿಯರು ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುವುದರ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುವುದರೊಂದಿಗೆ ಮಕ್ಕಳಲ್ಲಿರುವ ಸೂಪ್ತವಾದ ಪ್ರತಿಭೆಗಳನ್ನು ಗುರುತಿಸಿ ಸರಕಾರದ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಸ್ಥಳೀಯ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಮಕ್ಕಳು ವಿಜೇತರಾಗುವುದರ ಮೂಲಕ ಶಿಕ್ಷಣಾಲಯವನ್ನು ಸ್ವರ್ಣಯುಗದತ್ತ ಕೊಂಡೊಯ್ಯುವುದರ ಮೂಲಕ ವಿಜಯಪತಾಕೆಯನ್ನು ಹಾರಿಸಿದ್ದಾರೆ.
ಸರಕಾರದಿಂದ ಈ ಶಾಲೆಯನ್ನು ನಿಯುಕ್ತಿಕೊಂಡ ಕೆಲವು ಶಿಕ್ಷಕ ಶಿಕ್ಷಕಿಯರ ಚತುರತೆಯಿಂದ ಮಕ್ಕಳು ಪಠ್ಯದ ಜೊತೆಯಲ್ಲಿ ಪಠ್ಯೇತ್ತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಿ ಮಕ್ಕಳಿಂದಲೇ ನಿರ್ಮಾಣವಾದ ಹಸ್ತಾಪ್ರತಿಯಾದ “ಅಕ್ಷರ ದೀಪ” ಹಾಗೂ ಇನ್ನೀತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವುದರೊಂದಿಗೆ ಈ ಶಾಲೆ ಮಾದರಿಯಾಗಿ ಹೊರಹೊಮ್ಮುವಂತೆ ಸೇವೆ ಸಲ್ಲಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗಿದ್ದಾರೆ. ಎಂದರೆ ಅತಿಶಯೋಕ್ತಿಯಾಗಲಾರದು.
ಆರಂಭಗೊಂಡ ಅನೇಕ ವರ್ಷಗಳ ನಂತರ ಸರಕಾರ ಹಾಗೂ ಗ್ರಾಮಸ್ಥರ ಸಹಕಾರದಿಂದ ಅನೇಕ ಯೋಜನೆಗಳ ಮೂಲಕ ಶಾಲೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಊರಿನ ಗ್ರಾಮಸ್ಥರು ಅವಿರತವಾಗಿ ತನುಮನ ಧನಗಳ ಮೂಲಕ ಸಹಕರಿಸಿ ಎಲ್ಲಾ ವ್ಯವಸ್ಥೆಗಳನ್ನು ಪಡೆದುಕೊಳ್ಳುವುದರ ಮೂಲಕ ಸುಸಜ್ಜಿತ ಚಿಕ್ಕ ಶಿಕ್ಷಣಾಲಯವಾಗಿ ಕಂಗೊಳಿಸುತ್ತಿವೆ.
ಹಚ್ಚಹಸಿರಿನ ಪ್ರಕೃತಿಯ ಮಡಿಲಿನಲ್ಲಿ ಉದಯಿಸಿ ಅಮೃತಮಯವಾದ ಶಿಕ್ಷಣಾಲಯ ಶತಮಾನದಾಚೆಗೂ ನಿರಂತರವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ನಿರಂತರವಾಗಿ ಮುನ್ನಡೆಯುತ್ತಿರಲಿ ಎಂಬುದು ಶಿಕ್ಷಣಾಭಿಮಾನಿಗಳ ಆಶಯವಾಗಿದೆ.