• Slide
    Slide
    Slide
    previous arrow
    next arrow
  • ಮಾ.6ಕ್ಕೆ ಕಾನಮುಸ್ಕಿ ಶಾಲೆಯಲ್ಲಿ ಅಮೃತಮಹೋತ್ಸವ

    300x250 AD

    ಶಿರಸಿ:1946 ರಲ್ಲಿ ಸ್ಥಾಪನೆಯಾಗಿ 75 ವಸಂತಗಳನ್ನು ಪೂರೈಯಿಸಿರುವ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಮಾರ್ಚ 6 ರಂದು ಮಧ್ಯಾಹ್ನ ಘಂಟೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

    ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎಮ್.ಇ.ಎಸ್. ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ವಿಜಯಾ ನಳಿನಿ ರಮೇಶ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾನಳ್ಳಿ ಸೊಸೈಟಿ ಅಧ್ಯಕ್ಷರಾದ ಎನ್.ಎಸ್. ಹೆಗಡೆ ಕೋಟಿಕೊಪ್ಪ ,ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಪಿ. ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಎಸ್. ಹೆಗಡೆ ವಾನಳ್ಳಿ, ಗ್ರಾಪಂ ಅಧ್ಯಕ್ಷರಾದ ಜಯರಾಮ ಹೆಗಡೆ, ಗ್ರಾ.ಪಂ. ಸದಸ್ಯೆ ಮಂಜಿ ರಾಮ ಭೋವಿ ಹಾಗೂ ಚೈತನ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಅನಂತ ಮೂರ್ತಿ ಭಟ್ ಇವರ ಉಪಸ್ಥಿತಿ ಇರಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಡಿ.ಎಮ್. ಹೆಗಡೆ ಕಾನಮುಸ್ಕಿ ವಹಿಸಲಿದ್ದಾರೆ.

    300x250 AD

    ಸಭಾ ಕಾರ್ಯಕ್ರಮದ ನಂತರ ಹಳೆಯ ವಿದ್ಯಾರ್ಥಿಗಳಿಂದ ಲಘು ಮನರಂಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8-00 ಘಂಟೆಯಿಂದ ಆಯ್ದ ಯಕ್ಷಕಲಾವಿದರುಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಮೃತ ಮಹೋತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸುವಂತೆ ಅಮೃತ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top