ಕುಮಟಾ: ಅರಣ್ಯವಾಸಿಗಳ ಜಾಗೃತಿ ಜಾಥದ ಅಂಗವಾಗಿ ಕುಮಟಾ ತಾಲೂಕಿನಾದ್ಯಂತ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತಾರು ಹಳ್ಳಿಗಳಲ್ಲಿ ಅರಣ್ಯ ಹಕ್ಕು ಜಾಗೃತಿ ಮತ್ತು ಮಾಹಿತಿ ಹಕ್ಕು ಕಾರ್ಯಕ್ರಮ ಜರುಗಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಕುಮಟ ತಾಲೂಕಿನ ಮಿರ್ಜಾನ, ಕೋಡಕಣಿ, ಬರ್ಗಿ, ಹಿರೇಗುತ್ತಿ, ಗೋಕರ್ಣ, ದಿವಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋರಾಟಗಾರರ ವಾಹಿನಿಯ ಮೇಲೆ ಜಾಥ ಕಾರ್ಯಕ್ರಮ ಜರುಗಿಸಲಾಯಿತು.
ಜಾಥದಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಸಾರಂಬಿ ಶೇಖ್, ಯಾಕೂಬ ಬೇಟ್ಕುಳಿ, ಶಾಂತಿ ಮುಕ್ರಿ. ಕಮಲಾ ನಾಯ್ಕ, ದತ್ತಾತ್ರೇಯ ಹರಿಕಾಂತ, ಆದಿತ್ಯ ಹರಿಕಾಂತ, ಜಾನ್ ಮಿರ್ಜಾನ್, ಸಾವೇರ್ ಫರ್ನಾಂಡಿಸ್ ಮಿರ್ಜಾನ, ಮಾದೇವ ಆರೇರ್ ಬರ್ಗಿ, ಜಗದೀಶ ಹರಿಕಾಂತ, ಮಂಜುನಾಥ ಮೂರುರು ಮುಂತಾದವರು ಉಪಸ್ಥಿತರಿದ್ದರು.
ಅತಿಕ್ರಮಣ ಸಮಸ್ಯೆ ಅದಾಲತ್ :
ಅರಣ್ಯವಾಸಿಗಳ ಗ್ರಾಮ ಹಳ್ಳಿಗಳಿಗೆ ಬೇಟ್ಟಿಕೊಟ್ಟಂತಹ ಸಂದರ್ಭದಲ್ಲಿ ಭೂಮಿ ಹಕ್ಕಿಗೆ ಸಂಬಂಧಿಸಿ ಕಾನೂನಾತ್ಮಕ ಅಂಶ, ಅರಣ್ಯ ಅಧಿಕಾರಿಗಳ ದೌರ್ಜನ್ಯ, ಮಂಜೂರಿ ಪ್ರಕ್ರೀಯೆ ಮುಂತಾದ ಸಮಸ್ಯೆಗಳ ಕುರಿತು ಪ್ರಶ್ನೆಗಳಿಂದ ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಮಾಹಿತಿ ನೀಡುವ ಅದಾಲತ್ ಜರುಗಿಸುವುದು ಜಾಥದ ವಿಶೇಷವಾಗಿತ್ತು.