• Slide
  Slide
  Slide
  previous arrow
  next arrow
 • ಅನುದಾನಿತ ಪ್ರೌಢ, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಭಾಪತಿ ಹೊರಟ್ಟಿ ಆದೇಶ

  300x250 AD

  ಶಿರಸಿ:ರಾಜ್ಯದ ಅನುದಾನಿತ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ೩೧-೧೨-೨೦೧೫ರ ವರೆಗೆ ನಿಧನ, ನಿವೃತ್ತಿ ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಪರವಾನಿಗೆ ನೀಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

  ಅನುದಾನಿತ ಪ್ರೌಢಶಾಲೆ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವಂತಿಲ್ಲ ಎಂದು ಮಿತವ್ಯಯ ಆದೇಶ ಜಾರಿ ಮಾಡಿದ್ದು, ಸದರಿ ಆದೇಶ ಈಗಲೂ ಕೂಡಾ ಜಾರಿಯಲ್ಲಿದೆ ಎಂಬುದನ್ನು ಮುಚ್ಚಿಡಲಾಗುತ್ತದೆ.

  ನಂತರ ಸರಕಾರದ ಪತ್ರ ೦೫-೦೭-೨೦೨೧ರನ್ವಯ ಅನುದಾನಿತ ಪ್ರೌಢಶಾಲೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಕೇವಲ ೨೫೭ ಹುದ್ದೆಗಳನ್ನು ೨೦೨೧-೨೨ನೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ನಂತರ (ಜೂನ್-ಜುಲೈ) ನೇಮಕಾತಿ ಆದೇಶ ನೀಡಬಹುದೆಂದು ತಿಳಿಸಲಾಗಿದೆ. ವಾಸ್ತವವಾಗಿ ರಾಜ್ಯದಲ್ಲಿ ಬೆಂಗಳೂರು ಆಯುಕ್ತಾಲಯದ ವ್ಯಾಪ್ತಿಯಲ್ಲಿ ೪೨೩೯ ಧಾರವಾಡ ಆಯುಕ್ತಾಲಯದ ವ್ಯಾಪ್ತಿಯಲ್ಲಿ ೧೮೪೩ ಹಾಗೂ ಕಲಬುರಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ೯೬೩ ಹೀಗೆ ಒಟ್ಟು ೭೦೪೫ ಹುದ್ದೆಗಳು ಈ ಅವಧಿಯಲ್ಲಿ ಖಾಲಿಯಾಗಿವೆ. ಸರಕಾರವು ೨೯೧೭ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ಇನ್ನೂವರೆಗೆ ಅನುಮತಿ ಕೊಟ್ಟಿಲ್ಲ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟಿಲ್ಲ.

  300x250 AD

  ಕಾರಣ ೩೧-೧೨-೨೦೧೫ರ ವರೆಗೆ ರಾಜ್ಯದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವದರೊಂದಿಗೆ ಖಾಸಗಿ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ೦೧-೦೧-೨೦೧೬ ರಿಂದ ೩೧-೧೨-೨೦೨೧ರ ವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೂರೂ ಆಯುಕ್ತಾಲಯಗಳಿಂದ ಮಾಹಿತಿ ಪಡೆದು ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವದಕ್ಕೆ ಮೊದಲು ಸರಕಾರಿ ಆದೇಶ ಹೊರಡಿಸುವಂತೆ ಕೋರಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top