ಭಟ್ಕಳ: ಪ್ಯಾಸೆಂಜರ್ ಆಟೋ ಸ್ಕೂಟಿಗೆ ಡಿಕ್ಕಿ ಹೊಡೆಡಿದ್ದು ಸ್ಕೂಟಿ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಹೆಬಳೆ ಬೇಲಿಗದ್ದೆ ಒಂದನೇ ಕ್ರಾಸ್ ಬಳಿ ನಡೆದಿದೆ.
ಮುಂಡಳ್ಳಿ ನಿವಾಸಿ ಗಣೇಶ ನಾಯ್ಕ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಪ್ಯಾಸೆಂಜರ್ ಆಟೋ ಚಾಲಕನು ಭಟ್ಕಳ ಕಡೆಯಿಂದ ತೆಂಗಿನಗುಂಡಿ ಕಡೆಗೆ ಅತಿವೇಗವಾಗಿ ನಿಷ್ಕಾಳಜಿಯಿಂದ ಆಟೋ ಚಲಾಯಿಸಿಕೊಂಡು ಬಂದಿದ್ದು, ಬೇಲೆಗದ್ದೆ ಒಂದನೇ ಕ್ರಾಸ್ ಸಮೀಪ ತೆಂಗಿನಗುಂಡಿ ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನಿಗೆ ಹಣೆ ಭಾಗಕ್ಕೆ ಮತ್ತು ಕೈ ಬೆರಳಿಗೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ.
ಸ್ಕೂಟಿಯ ಹಿಂಬದಿ ಸವಾರನಿಗೆ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಪೆಟ್ಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದ ವೇಳೆ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ .
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.