ಅಂಕೋಲಾ: ಅರಣ್ಯವಾಸಿಗಳನ್ನು ಉಳಿಸಿ, ತಾಲೂಕಿನ ಜಾಥದ ಕಾರ್ಯಕ್ರಮ ಅಚಿವೆ ಗ್ರಾಮ ಪಂಚಾಯತ ಸಮುದಾಯ ಭವನದಲ್ಲಿ ಮುಂಜಾನೆ ೯:೩೦ ಕ್ಕೆ ಜರುಗಲಿದೆ ಎಂದು ಅಂಕೋಲಾ ತಾಲೂಕಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರಮಾನಂದ ನಾಯಕ, ಅಚಿವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಲ್ಲಿ ಜಾಗೃತ ಮೂಡಿಸುವದು, ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಸರಕಾರದ ಮೇಲೆ ಹೇಚ್ಚಿನ ಒತ್ತಡ ತರುವ ಉದ್ದೇಶದಿಂದ ಹಮ್ಮಿಕೊಂಡ ಜಾಥವು ಜಿಲ್ಲಾದ್ಯಂತ ಪ್ರಥಮ ಹಂತವಾಗಿ ಒಂದು ಸಾವಿರ ಕೀ.ಮೀ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡಲು ಹೋರಾಟಗಾರರ ವೇದಿಕೆ ನಿರ್ಧರಿಸಿದೆ.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲಾ ಪ್ರಧಾನ ಸಂಚಾಲಕರಾದ ಜಿ.ಎಮ್ ಶೆಟ್ಟಿ ಅವರು ಜಾಥಕ್ಕೆ ಚಾಲನೆ ನೀಡುವರು ಆದ್ದರಿಂದ ಅಂಕೋಲಾ ತಾಲೂಕಿನ ಜಾಥ ಚಾಲನೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.