ಶಿರಸಿ:ರಾಜ್ಯ ಮಟ್ಟದ ೩ ನೇ ಹಿರಿಯರ ಕ್ರೀಡಾಕೂಟ ಉಡುಪಿಯ ಮಹಾತ್ಮಗಾಂದಿ ಕ್ರೀಡಾಂಗಣದಲ್ಲಿ ಮಾ.12 ಮತ್ತು 13 ರಂದು ಜರುಗಲಿದ್ದು ಆಸಕ್ತ ಹಿರಿಯ ಕ್ರೀಡಾಪಟುಗಳು ಮಾ.೫ ರ ಒಳಗೆ ಪ್ರವೇಶ ಪತ್ರ ಕಳಿಸಲು ರಾಜ್ಯ ಮಾಸ್ಟರ್ ಗೇಮ್ ಅಸೋಶಿಯೇಶನ್- ಉಪಾಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂವತ್ತರಿಂದ ತ್ತೊಂಬತ್ತು ವರ್ಷದಲ್ಲಿನ ವಿವಿಧ ೧೧ ವಯಸ್ಸಿನ ಗುಂಪಿನ ಹಿರಿಯರಿಗೆ ಅಥ್ಲೇಟಿಕ್, ಬ್ಯಾಡ್ಮಿಟನ್, ಬಾಸ್ಕೇಟ್ ಬಾಲ್, ಹೆಂಡ್ ಬಾಲ್, ಕಬ್ಬಡ್ಡಿ, ಸ್ವಿಮಿಂಗ್, ಟೇಬಲ್ ಟೇನಿಸ್, ಟೇನಿಸ್, ವಾಲಿಬಾಲ್ ಹಾಗೂ ವೇಟ್ ಲಿಪ್ಟಿಂಗ್‌ಗಳಿಗೆ ಪುರುಷ ಮತ್ತು ಮಹಿಳೆಯರ ಸ್ಪರ್ಧೆ ಜರುಗಲಿದೆ ಎಂದು ಅವರು ಪ್ರಕಟಣೆ ತಿಳಿಸಿದೆ.
ಕ್ರೀಡಾ ಕೂಟದ ಹೆಚ್ಚಿನ ಮಾಹಿತಿಗಾಗಿ ಶಾಲಿನಿ ಶೆಟ್ಟಿ (೯೫೫೩೨೯೮೩೭೭) ಅವರನ್ನು ಸಂಪರ್ಕಿಸಲು ಕೋರಲಾಗಿದೆ.