ಹೊನ್ನಾವರ: ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಕಾರ್ಯಕ್ರಮ ಮಾ.5 ರ ಶನಿವಾರ ಬೆಳಿಗ್ಗೆ 10ಕ್ಕೆ ಹೊನ್ನಾವರ ಸರ್ಕಲ್‌ನಲ್ಲಿ ಜರುಗಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅದ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ ಸರ್ಕಲ್‌ನ ಆವರಣದಿಂದ ಚಾಲನೆ ನೀಡಿ, ನಂತರ ಜಾಥವು ಹೊನ್ನಾವರ ಸರ್ಕಲ್‌ನಿಂದ -ಬಸ್ ಸ್ಟಾಂಡ್ – ಹೊನ್ನಾವರ ಸರ್ಕಲ್- ಮೂಡಗಣಪತಿ ದೇವಸ್ಥಾನದ ಆವರಣದವರೆಗೆ ಜಾಥ ಜರುಗಿಸಲು ನಿರ್ಧರಿಸಲಾಗಿದೆ.
ಅರಣ್ಯವಾಸಿಗಳನ್ನು ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ೩೦ ದಿನಗಳಲ್ಲಿ ೧೦೦೦ ಕೀ.ಮೀ ‘ಹೋರಾಟದ ವಾಹನ’ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಸಕ್ತ ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ರವೀಂದ್ರ ನಾಯ್ಕ ತಿಳಿಸಿದ್ದಾರೆ.