ಮುಂಡಗೋಡ: ಬಾರ್ & ರೆಸ್ಟೊರೆಂಟ್ ಆರಂಭಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕಾತೂರು ಗ್ರಾಮದಲ್ಲಿ ನಡೆದಿದೆ.
ನಮ್ಮ ಗ್ರಾಮದ ವ್ಯಾಪ್ತಿಯಲ್ಲಿನ ಜನರು ಹಾಗೂ ಕೆಲ ಸಂಘಟನೆ ಮುಖಂಡರು ಕಾತೂರ ಗ್ರಾಮದಲ್ಲಿಯೇ ಬಾರ್ & ರೆಸ್ಟೊರೆಂಟ್ ಬೇಕು ಮದ್ಯ ವ್ಯಸನಿಗಳು ಹೆಚ್ಚಿನ ಹಣ ಕೊಟ್ಟು ಬೇರೆಡೆಗೆ ಹೋಗಿ ಕುಡಿಯುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಆದರೆ ಕಡಿಮೆ ಹಣದಲ್ಲಿ ಮದ್ಯ ಸಿಗುತ್ತದೆ ಎಂದು ಪ್ರತಿಭಟಿಸಿದರು.
ವಿಷಯ ತಿಳಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತು ಸಿಪಿಐ ಎಸ್.ಎಸ್. ಸಿಮಾನಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟಿಸುತ್ತಿದ್ದ ಪ್ರತಿಭಟನಕಾರ ಜೊತೆ ಮಾತನಾಡಿ, ಕಂದಾಯ, ಪೆÇಲೀಸ್, ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ತಂಡವು ಪ್ರತಿಭಟನೆ ನಡೆಸುವವರ ಜಂಟಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಲ್ಲಿಯವರೆಗೂ ಯಾರೂ ಪ್ರತಿಭಟನೆ ನಡೆಸಬಾರದೆಂದು ಸೂಚಿಸಿದರು.
ಕೆಲವು ಮುಖಂಡರು ಮಾತನಾಡಿ ಬಾರ್ & ರೆಸ್ಟೊರೆಂಟ್‍ನ್ನು ಪ್ರಾರಂಭಿಸಲು ನ್ಯಾಯಾಲಯದ ಆದೇಶ ವಿದೆ. ವಿರೋಧಿಸುವರು ಸ್ಥಳೀಯರಲ್ಲ. ಅದರಲ್ಲಿ ಕೆಲವರು ಮಾತ್ರ ಸ್ಥಳೀಯರು ಇದ್ದಾರೆ. ಅಕಸ್ಮಾತ ಮಾರ್ಚ 4 ರ ನಂತರ ಗ್ರಾಮದಲ್ಲಿರುವ ಈ ಅಂಗಡಿಯ ಪರವಾನಿಗೆ ರದ್ದು ಮಾಡಿದರೇ ಮರು ದಿನವೇ ಮುಂಡಗೋಡದಲ್ಲಿ ಪ್ರತಿಭಟಿಸುತ್ತೇವೆ. ಅಲ್ಲದೇ ತಾಲೂಕಿನಾದ್ಯಂತ ಇರುವ ಹಳ್ಳಿಗಳ ಗಲ್ಲಿಗಳಲ್ಲಿ ಮತ್ತು ಕಿರಾಣೆ ಅಂಗಡಿಗಳಲ್ಲಿ ಮಧ್ಯ ಸಿಗುತ್ತದೆ. ಅವುಗಳನ್ನು ಬಂದ ಮಡಬೇಕು ಮದ್ಯ ಮುಕ್ತ ತಾಲೂಕು ಮಾಡಲು ನಾವೇ ಪ್ರತಿಭಟನೆ ಮಾಡುತ್ತೇವೆ ಎಂದರು. ಸಿಪಿಐ ಎಸ್.ಎಸ್ ಸಿಮಾನಿ ಅವರು ಜನರನ್ನು ಮನವೋಲಿಸಿ ಅಲ್ಲಿಂದ ಕಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಬಸವರಾಜ ಸಂಗಮೇಶ್ವರ, ಬಸವರಾಜ ಹಳ್ಳಮ್ಮೆವರ, ಮಂಜುನಾಥ ಹರಿಜನ, ರಾಮಕೃಷ್ಣ ಮೂಲಿಮನಿ, ಪ್ರಕಾಶ ಅಜ್ಜಮ್ಮನವರ, ಮೋಹನ ಕೇದಾರ. ಅಜ್ಜಪ್ಪ ಕಡಬಗೇರಿ, ಶಿವಾಜಿ ಶಿಂಧೆ ಸೇರಿದಂತೆ 200 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.