ಮುಂಡಗೋಡ: ತಾಲೂಕಿನ ಕಾತೂರ ಗ್ರಾಮದಲ್ಲಿ ನೂತನವಾಗಿ ಬಾರ್ & ರೆಸ್ಟೊರೆಂಟಗೆ ನೀಡಿದ ಅನುಮತಿಯನ್ನು ರದ್ದು ಮಾಡುವಂತೆ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹಾಗೂ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮಣ್ಣ ಭೋವಿ ನೇತೃತ್ವದಲ್ಲಿ ಕಾತೂರ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತು ಸಿಪಿಐ ಎಸ್.ಎಸ್. ಸಿಮಾನಿ ಅವರು ನೂತನವಾಗಿ ಬಾರ್ & ರೆಸ್ಟೊರೆಂಟಗೆ ನೀಡಿದ ಅನುಮತಿಯನ್ನು ರದ್ದು ಮಾಡುವಂತೆ ಪ್ರತಿಭಟಿಸುತ್ತಿದ್ದ ಪ್ರತಿಭಟನಕಾರ ಜೊತೆ ಮಾತನಾಡಿ, ಕಂದಾಯ, ಪೊಲೀಸ್ ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ತಂಡವು ಪ್ರತಿಭಟನೆ ನಡೆಸುವವರ ಜಂಟಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಲ್ಲಿಯವರೆಗೂ ಯಾರೂ ಪ್ರತಿಭಟನೆ ನಡೆಸಬಾರದೆಂದು ಸೂಚಿಸಿದಾಗ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ನಂತರ ತಹಶೀಲ್ದಾರ ಅವರು ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪೀರಣ್ಣ ಲಕ್ಮಪೂರ, ಅಶ್ವತ್ಥಾಮ ಮಲವಳ್ಳಿ, ನಿಂಬೋಜಿ ಪಾಟೀಲ ಸೇರಿದಂತೆ ಇತರರಿದ್ದರು.