ಮುಂಡಗೋಡ:ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 50 ಸಾವಿರ ರೂಪಾಯಿ ಮೌಲ್ಯದ ಭತ್ತದ ಹುಲ್ಲಿನ ಬಣವೆ ಹಾಗೂ ಹೆಸರು ಕಾಳಿನ ಹೊಟ್ಟಿನ ಬಣವೆ ಸುಟ್ಟು ಹಾನಿ ಸಂಭವಿಸಿದ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸೋಮವಾರ ಜರುಗಿದೆ.
ನಂದಿಕಟ್ಟಾ ಗ್ರಾಮದ ಮಂಜುನಾಥ ಮಹದೇವಪ್ಪ ತಳವಾರ ಎಂಬ ರೈತನಿಗೆ ಸೇರಿದ ಗದ್ದೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಐದು ಟ್ರ್ಯಾಕ್ಟರನಷ್ಟು ಭತ್ತದ ಹುಲ್ಲಿನ ಬಣವೆ ಹಾಗೂ ಹೆಸರು ಕಾಳಿನ ಹೊಟ್ಟಿನ ಬಣವೆಗೆ ಬೆಂಕಿ ತಗುಲಿದೆ, ಗ್ರಾಮಸ್ಥರು ಹಾಗೂ ರೈತ ಬೆಂಕಿಯನ್ನು ನಂದಿಸಲು ಮುಂದಾದರು ಹತೋಟಿಗೆ ಬಾರದೆ ಇದ್ದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೆ ಆಗಮಿಸಿ ಅಗ್ನಿಶಾಮಕ ದಳದವರು ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿ ಬೆಂಕಿಯಿಂದ ಮೂವತ್ತು ಸಾವಿರ ರೂಪಾಯಿಗಳಷ್ಟು ಹಾನಿ ತಪ್ಪಿಸಿದ್ದಾರೆ. ಸುಮಾರು ಐವತ್ತು ಸಾವಿರ ರೂಪಾಯಿಗಳಷ್ಟು ಹಾನಿ ಸಂಭವಿಸಿದೆ.
ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ನಾರಾಯಣ ತಳೆಕರ್, ಸಿಬ್ಬಂದಿಗಳಾದ ಬಸವರಾಜ ಇಂಚಲ್ ಮಂಜುನಾಥ ಪಟಗಾರ, ಸೋಮಶೇಖರ, ಚಮನಸಾಬ ನಧಾಪ್ ಮುಂತಾದವರು ಕಾರ್ಯಾಚರಣೆಯಲ್ಲಿದ್ದರು.