ಮುಂಡಗೋಡ: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ಹಿನ್ನೆಲೆಯಲ್ಲಿ ಉಕ್ರೇನನ್ ಖಾರ್ಕಿವ್‍ನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ಪಟ್ಟಣದ ವಿದ್ಯಾರ್ಥಿನಿಯರಿಬ್ಬರು ಸಿಲುಕಿಕೊಂಡಿದ್ದು ಕಳೆದ ಎರಡು ದಿನಗಳಿಂದ ಮೇಟ್ರೋ ಬಂಕರನಲ್ಲಿ ಲಾಕ್ ಮಾಡಿದ್ದು ಊಟ ನೀರು ಇಲ್ಲದೆ ಪರದಾಡುತ್ತಿರುವ ಬಗ್ಗೆ ವಿಡಿಯೋ ಕರೆ ಮಾಡಿ ತಮ್ಮ ಪರಿಸ್ಥಿತಿಯನ್ನು ಪಾಲಕರಿಗೆ ತೋಡಿಕೊಂಡಿದ್ದಾರೆ.
ಉಕ್ರೇನನ ಖಾರ್ಕಿವ್‍ನಲ್ಲಿ ಮತ್ತೆ ಎರಡು ದಿನಗಳಿಂದ ಪರಿಸ್ಥಿತಿ ತೀರಾ ಹದಗೇಟ್ಟಿದೆ, ಬಾಂಬ್‍ಗಳ ಸುರಿ ಮಳೆಯಾಗುತ್ತಿದ್ದು, ಅದರ ಸದ್ದನ್ನು ಕೆಳಲು ತೀವ್ರ ಭಯವಾಗುತ್ತಿದೆ ಪ್ರತಿದಿನವೂ ಬಾಂಬ್‍ನ ಸದ್ದು ಕೇಳಬೇಕಾದ ಸ್ಥಿತಿ ನಮಗೆ ಬಂದಿದೆ. ಶನಿವಾರ ಹಾಗೂ ರವಿವಾರ ಮೇಟ್ರೋದ ಬಂಕರ್‍ನಲ್ಲಿ ಗೇಟ್‍ಗಳನ್ನು ಬಂದ್ ಮಾಡಿರುವುದರಿಂದ ಊಟ ನೀರಿಲ್ಲದೆ ಪರದಾಡಿದ್ದೆವೆ. ಸೋಮವಾರ ಬೆಳಗ್ಗೆ ತಮ್ಮ ವಸತಿ ನಿಲಯಗಳಿಗೆ ತೆರಳಲು ಅವಕಾಶ ಕಲ್ಪಿಸಿದ್ದಾರೆ. ಅಡುಗೆ ಮಾಡಿಕೊಂಡು ನೀರನ್ನು ಸಂಗ್ರಹಿಸಿ ಇಟ್ಟು ಕೋಳ್ಳುವಂತೆ ಸೂಚಿಸಿದ್ದಾರೆ. ಮತ್ತೆ ಗಂಟೆ ಬಾರಿಸಿದ ನಂತರ ಮೇಟ್ರೋ ಬಂಕರ್‍ಗೆ ಬರುವಂತೆ ತಿಳಿಸಿದ್ದಾರೆ. ಎಂದು ವಿದ್ಯಾರ್ಥಿನಿಗಳಾದ ಸ್ನೇಹಾ ಪಕ್ಕಿರಪ್ಪ ಹೊಸಮನಿ ಹಾಗೂ ನಾಜೀಯಾ ಗಾಜೀಪೂರ ತಮ್ಮ ತಂದೆ ತಾಯಿಗಳ ಹತ್ತಿರ ವಿಡಿಯೋ ಕರೆ ಮಾಡಿ ತಿಳಿಸಿದ್ದಾರೆ.
ಸ್ನೇಹಾಳ ತಂದೆ ಫಕ್ಕೀರಪ್ಪ ಮಾತನಾಡಿ, ಕಳೆದ ಎರಡು ದಿನಗಳಿಂದ ಮಕ್ಕಳು ಊಟ ನೀರಿಲ್ಲದೆ ಮೇಟ್ರೋ ಬಂಕ್‍ನಲ್ಲಿ ಹೆದರಿ ಜೀವನ ಕೈಯಲ್ಲಿ ಹಿಡಿದು ಕೊಂಡಿದ್ದಾರೆ. ಬಹಳ ತೊಂದೆಯಲ್ಲಿದ್ದಾರೆ ಕೇಂದ್ರ ಸರಕಾರ ಜೋತೆ ಮಾತನಾಡಿ ಖಾರ್ಕಿವ್‍ನಿಂದ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆ ತರುವಂತೆ ವಿನಂತಿಸಿದರು.
ನಾಜೀಯಾಳ ತಂದೆ ಬಾಬಾಜಾನ್ ಗಾಜೀಪೂರ ಮಾತನಾಡಿ, ನಾನು ಇಲ್ಲಿ ಬಟ್ಟೆ ಹೊಲಿದು ಜೀವನ ನಡೆಸುತ್ತಿದ್ದೇನೆ, ನನ್ನ ಮಗಳು ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿಕೊಂಡಿದ್ದಾಳೆ ಅವಳನ್ನು ರಕ್ಷಣೆ ಮಾಡಿ ಆದಷ್ಟು ಬೇಗ ಭಾರತಕ್ಕೆ ಕರೆ ತರಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಬೇಡಿಕೋಳ್ಳುತ್ತೆನೆ ಎಂದರು.