ನ್ಯಾಯಬೆಲೆ ಅಂಗಡಿಕಾರರ ಕಮೀಷನ್ ಹಣವನ್ನು 2022-23 ರ ಈ ವರ್ಷದ ಬಜೆಟ್‍ನಲ್ಲಿ ರೂ. 100 ರಿಂದ 200 ಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಪಡಿತರ ವಿತರಕರ ಸಂಘದ ವತಿಯಿಂದ ಜಿಲ್ಲಾ ಪಡಿತರ ಸಂಘದ ಅಧ್ಯಕ್ಷ ನಜೀರ ಮೂಡಿ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ನ್ಯಾಯಬೆಲೆ ಅಂಗಡಿಕಾರರು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾಲ ಕಾಲಕ್ಕೆ ಸರಕಾರವು ಸರಬರಾಜು ಮಾಡಿದ ಪಡಿತರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದೆ. ಕೋವಿಡ್ ಸಮಯದಲ್ಲಿಯೂ ಸಹ ತಮ್ಮ ಜೀವದ ಹಂಗು ಮರೆತು ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಪಡಿತರ ವಿತರಣೆಗಾಗಿ ಹಾಲಿ ಕರ್ನಾಟಕ ಸರಕಾರದವರು ಪ್ರತಿ ಕ್ವಿಂಟಲ್‍ಗೆ ರೂ 100/- ನಿಗದಿ ಮಾಡಿದ್ದು ಇದರಿಂದ ನ್ಯಾಯಬೆಲೆ ಅಂಗಡಿಕಾರರು ತಮ್ಮ ಅಂಗಡಿಯ ಬಾಡಿಗೆ, ಕರೆಂಟ್ ಬಿಲ್, ಮುಂತಾದವುಗಳನ್ನು ಭರಿಸಿ ಸದ್ರಿ ಅತೀ ಕಡಿಮೆ ದರದಲ್ಲಿ ಪಡಿತರ ವಿತರಣೆ ಮಾಡಲು ತುಂಬಾ ತೊಂದರೆಯಾಗುತ್ತಿದೆ.
ಈಗ ಪ್ರತಿಯೊಂದು ಸಾಮಗ್ರಿಗಳ, ಕೂಲಿಕಾರರ, ವಿದ್ಯುತ್, ಕಂಪ್ಯೂಟರ್, ಇಂಟರ್ನೆಟ್, ಪೆಟ್ರೋಲ್, ಎಲ್ಲ ದರಗಳೂ ಹೆಚ್ಚಾಗಿದ್ದು ಇದರಿಂದ ನಾವು ಪಡಿತರ ವಿತರಕರು ಅತೀ ಕಡಿಮೆ ಕಮೀಷನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಮಾತ್ರ ಕಮೀಷನ್ ಹಣ ಅತೀ ಕಡಿಮೆ ಇದ್ದು ನಮ್ಮ ಪಕ್ಕದ ಗೋವಾರಾಜ್ಯದಲ್ಲಿ ಪ್ರತಿ ಕ್ವಿಂಟಲ್‍ಗೆ ರೂ. 200 ಸಂದಾಯ ಮಾಡುತ್ತಿದ್ದಾರೆ. ಕಾರಣ ಕರ್ನಾಟಕ ರಾಜ್ಯದಲ್ಲಿಯೂ ಸಹ ಪ್ರತಿ ಕ್ವಿಂಟಲ್‍ಗೆ ಕಮೀಶನ್ ಹಣವನ್ನು ರೂ. 200 ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಕಮೀಷನ್ ಹೆಚ್ಚಿಸಿದಲ್ಲಿ ನಾವು ಇನ್ನೂ ಹೆಚ್ಚಿನ ದಕ್ಷತೆಯಿಂದ ಸಾರ್ವಜನಿಕರಿಗೆ ಪಡಿತರವನ್ನು ಹಂಚಲು ಸಾಧ್ಯವಾಗುತ್ತದೆ. ಅಲ್ಲದೇ ಪಡಿತರ ವಿತರಕರ ಕಮೀಶನ್ ಹಣ ಸಹ 6-8 ತಿಂಗಳು ತಡವಾಗಿ ಜಮಾ ಆಗುತ್ತಿದ್ದು ಇದರಿಂದ ನಮ್ಮ ಜೀವನೋಪಾಯಕ್ಕೆ ತುಂಬಾ ತೊಂದರೆಯಾಗಿದೆ. ಕಾರಣ ತಾವು ಪಡಿತರ ವಿತರಣೆಯ ಕಮೀಷನ್ ಹಣವನ್ನು ಕಾಲ ಕಾಲಕ್ಕೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಸಂದಾಯವಾಗುವಂತೆ ಮಾಡಲು ಹಾಗೂ ಕಮೀಶನ್ ಹಣವನ್ನು ಕ್ವಿಂಟಲ್ ಗೆ ರೂ. 200 ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.