ಮುಂಡಗೋಡ: ಹಿಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಅವರನ್ನು ಪಕ್ಷದ ಮುಖಂಡರ ಅಭಿಪ್ರಾಯದನ್ನಯ ತೆಗೆದುಕೊಳ್ಳದೆ ಬ್ಲಾಕ್ ಅಧ್ಯಕ್ಷ ಹುದ್ದೆಯಿಂದ ತೆಗೆದಿದ್ದಕ್ಕೆ ಯುವ ಮುಖಂಡ ಹಾಗೂ ತಾಲೂಕಾ ಹಿಂದೂಳಿದ ವರ್ಗದ ಅಧ್ಯ್ಯಕ್ಷ ಮಲ್ಲಿಕಾರ್ಜುನ ಗೌಳಿ ತಮ್ಮ ಹುದ್ದಗೆ ರಾಜೀನಾಮೆ ನೀಡಿದ್ದಾರೆ.
ಯಾವುದೇ ವಿಷಯವನ್ನು ಚರ್ಚಿಸದೆ ಮತ್ತು ತಾಲೂಕಿನ ಮುಖಂಡರ ಅಭಿಪ್ರಾಯವನ್ನು ಪಡೆಯದೆ ಕೃಷ್ಣ ಹಿರೇಹಳ್ಳಿ ಅವರನ್ನು ಅಧ್ಯಕ್ಷರ ಹುದ್ದೆಯಿಂದ ತೆಗೆದಿದ್ದಾರೆ. ಪಕ್ಷವು ಕಷ್ಟ ಕಾಲದಲ್ಲಿದ್ದಾಗ ಬೆನ್ನೆಲುಭಾಗಿ ದುಡಿದಂತಹ ಇವರನ್ನು ಏಕಾಏಕಿಯಾಗಿ ಹುದ್ದೆಯಿಂದ ತೆಗೆದಿರುವುದು ನನ್ನ ಮನಸ್ಸಿಗೆ ಹಾಗೂ ನನ್ನೆಲ್ಲ ಕಾರ್ಯಕರ್ತರಿಗೆ ನೋವಾಗಿದೆ. ಆದ ಕಾರಣ ಪಕ್ಷದ ಹಿಂದೂಳಿದ ವರ್ಗಗಳ ಜಿಲ್ಲ್ಲಾಧ್ಯಕ್ಷ ನಾಗರಾಜ ನಾರ್ವೇಕರ ಅವರಿಗೆ ಸೋಮವಾರ ನೀಡಿದ ರಾಜೀನಾಮೆ ಪತ್ರದಲ್ಲಿ ಮಲ್ಲಿಕಾರ್ಜುನ ಗೌಳಿ ತಿಳಿಸಿದ್ದಾರೆ.