ಶಿರಸಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು ಪಕ್ಷದ ಹಿರಿಯ ನಾಯಕರು ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರು “ಡಿಜಿಟಲ್ ಸದಸ್ಯತ್ವ ನೋಂದಣಿ” ಅಭಿಯಾನದ ಕುರಿತಂತೆ ಪ್ರಗತಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲು ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಭೇಟಿ ನೀಡಲು ನಾಲ್ಕು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬುಧವಾರ ಮಾ.2 ರಂದು ಬೆಳಿಗ್ಗೆ 10 ಗಂಟೆಗೆ ಬನವಾಸಿಗೆ ಆಗಮಿಸಿ ಬನವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಲಿದ್ದಾರೆ.
ಅವರ ಜೊತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ್, ಪಾಂಡಿಚೇರಿ ರಾಜ್ಯದ ಡಿಜಿಟಲ್ ಮೆಂಬರ್ಶಿಪ್ ಅಭಿಯಾನದ ಉಸ್ತುವಾರಿಗಳಾದ ನಿವೇದಿತ್ ಆಳ್ವ ಹಾಗೂ ಕೆಪಿಸಿಸಿಯಿಂದ ಜಿಲ್ಲೆಗೆ ನಿಯುಕ್ತಿಗೊಂಡ ಉಸ್ತುವಾರಿಗಳಾದ ವಿ.ಎಸ್.ಆರಾಧ್ಯ ,ಸುಷ್ಮಾ ರೆಡ್ಡಿ, ಶ್ರೀನಿವಾಸ್ ಹಳ್ಳಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಪ್ರಸನ್ನಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಕಾರಣ ಬನವಾಸಿ ಬ್ಲಾಕ್ ವ್ಯಾಪ್ತಿಯ ಮುಖ್ಯ ನೋಂದಣಿ ಕಾರರು, ಬೂತ್ ನೋಂದಣಿ ಕಾರರು, ಪ್ರಜಾಪ್ರತಿನಿಧಿ ಸಮಿತಿಯ ಪದಾಧಿಕಾರಿಗಳು,ಎಲ್ಲಾ ಸೆಲ್ ಪದಾಧಿಕಾರಿಗಳು,ಘಟಕಾಧ್ಯಕ್ಷರು, ಬೂತ್ ಅಧ್ಯಕ್ಷರು, ಎಲ್ಲ ಸ್ಥರದ ಜನಪ್ರತಿನಿಧಿಗಳು, ಹಿರಿಯ /ಕಿರಿಯ ಮುಖಂಡರು ಎಲ್ಲಾ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.