ಹಾವೇರಿ: ಉಕ್ರೇನ್ ನ ಕಾರ್ಕಿವ್ ನಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಯುವಕ ನವೀನ್ ರಷ್ಯಾದ ಗುಂಡಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವುದು ಅತ್ಯಂತ ದುರಾದೃಷ್ಟಕರ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಯಾವುದೇ ತಪ್ಪು ಮಾಡದ ದೇಶಕ್ಕಾಗಿಯೂ ಪ್ರಾಣತ್ಯಾಗ ಮಾಡದೇ, ಯಾವುದೋ ದೇಶಗಳ ಸಂಘರ್ಷದ ಕಾರಣದಿಂದ ಅಮಾಯಕವಾಗಿ ಒಂದು ಬಲಿಯಾಗಿರುವುದು ನಾಡಿಗೆ ಹಾಗೂ ಅವರ ಕುಟುಂಬಗಳಿಗೆ ತುಂಬಲಾರದ ನಷ್ಟ ತಂದಿದೆ. ಜೀವನದಲ್ಲಿ ತನ್ನ ಮಗ ಒಬ್ಬ ಡಾಕ್ಟರ್ ಆಗಬೇಕೆಂಬ ಕನಸು ನನಸಾಗುತ್ತದೆ ಎಂಬ ನಂಬಿಕೆ ಹೊತ್ತಿದ್ದ ಪೋಷಕರಿಗೆ ಈ ಸಾವು ಆಘಾತಕಾರಿಯಾಗಿದೆ. ಅವರ ಕುಟುಂಬಕ್ಕೆ ದುಖಃವನ್ನು ಬರಿಸುವಂತಹ ಶಕ್ತಿಯನ್ನು ದೇವರು ನೀಡಲಿ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಂತಾಪ ಸೂಚಿಸಿದ್ದಾರೆ.