ಹಾವೇರಿ: ರಷ್ಯಾ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದ ಕರ್ನಾಟಕ ವಿದ್ಯಾರ್ಥಿಯೋರ್ವನು ಸಾವನ್ನಪ್ಪಿದ್ದು, ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎಂಬಾತನು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕಾರ್ಕಿವ್‍ನಲ್ಲಿ ನಾಲ್ಕನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ನವೀನ್ ಈತನು ಅಗತ್ಯ ವಸ್ತುಗಳನ್ನು ತರಲು ಹೊರಗೆ ಹೋಗಿ ತರಕಾರಿಗಾಗಿ ಲೈನಿನಲ್ಲಿ ನಿಂತಿದ್ದ ವೇಳೆ ಉಕ್ರೇನ್-ರಷ್ಯಾ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದೇ ಸಮಯದಲ್ಲಿ ಗುಂಡು ತಗುಲಿ ನವೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಒಬ್ಬ ಬನವಾಸಿ, ಮತ್ತಿಬ್ಬರು ಮುಂಡಗೋಡಿನವರಾಗಿದ್ದಾರೆ. ಬನವಾಸಿ ವಿದ್ಯಾರ್ಥಿಯೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ರಾಗಿದ್ದಾರೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ಆತ ವಿನಿಟ್ಟಿಯಾದಿಂದ ಬಸ್ ಮೂಲಕ ರೊಮೇನಿಯಾ ಗಡಿಯನ್ನು ತಲುಪಿದ್ದಾನೆ. ರಾತ್ರಿ 9ರ ಹೊತ್ತಿಗೆ ಮುಂಡಗೋಡದ ಇಬ್ಬರೊಂದಿಗೆ ಮಾತನಾಡಿದ್ದು ,ಓರ್ವರು ಖಾರ್ಕಿವ್ ಭೂಗತ ಮೆಟ್ರೋ ನಿಲ್ದಾಣದಲ್ಲಿ, ಮತ್ತೋರ್ವ ಕಾಲೇಜು ಹಾಸ್ಟೆಲ್ ಬಂಕರ್‌ಗಳಲ್ಲಿದ್ದಾರೆ. ನಾವು ಅವರ ಸುರಕ್ಷತೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ನಿರಂತರ ಮಾಹಿತಿಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.