• Slide
    Slide
    Slide
    previous arrow
    next arrow
  • ಶಿರಸಿ ಲಯನ್ಸ್ ಕ್ಲಬ್- ಲಿಯೋ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    300x250 AD


    ಶಿರಸಿ: ಶಿರಸಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಿರಸಿ ಲಯನ್ಸ್ ಸಭಾಭವನದಲ್ಲಿ ಭಾನುವಾರ ನೆರವೇರಿತು. ಶಿರಸಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಎಂ.ಜೆ.ಎಫ್ ಲಯನ್ ಉದಯ ಸ್ವಾದಿ, ಕಾರ್ಯದರ್ಶಿಯಾಗಿ ಲಯನ್ ವಿನಯ ಹೆಗಡೆ ಮತ್ತು ಖಜಾಂಚಿಯಾಗಿ ಲಯನ್ ಅನಿತಾ ಹೆಗಡೆ ಪ್ರಮಾಣ ವಚನ ಸ್ವೀಕರಿಸಿದರು. ಲಯನ್ ರಮಾ ಪಟವರ್ಧನ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಲಯನ್ ವಿನಾಯಕ್ ಭಾಗವತ್ ಜಂಟಿ ಖಜಾಂಚಿಯಾಗಿ ಹಾಗೂ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
    ಮುಖ್ಯ ಅತಿಥಿಗಳಾಗಿ ಲಯನ್ಸ್ ಡಿಸ್ಟ್ರಿಕ್ಟ್ 317ಃ ಯ ಉಪ ಪ್ರಾಂತಪಾಲ- ಎಂ.ಜೆ.ಎಫ್.ಲಯನ್ ಸುಘಲಾ ಯಲಮಲಿ ಆಗಮಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಪದಗ್ರಹಣ ಸಮಾರಂಭವನ್ನು ನೆರವೇರಿಸಿ ಲಯನ್ಸ್ ಕ್ಲಬ್ ನ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ವಿವರಿಸಿ, ಪ್ರತಿಜ್ಞಾ ವಿಧಿ ಪೂರೈಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿರುವ ಲಯನ್ಸ ಕ್ಲಬ್ ನ ಸಹ ಸಂಸ್ಥೆ ಲಿಯೋ ಕ್ಲಬ್‍ನ್ನು ಶ್ರೀ ನಿಕೇತನ ಶಾಲೆ ಇಸಳೂರಿನಲ್ಲಿ ಉದ್ಘಾಟಿಸಲಾಯಿತು. ಈಗಾಗಲೇ ಶಿರಸಿ ಲಯನ್ಸ್ ಶಾಲೆಯ ಲಿಯೋ ಕ್ಲಬ್ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಜೊತೆಯಲ್ಲಿ ಇನ್ನೊಂದು ಲಿಯೋ ಕ್ಲಬ್ ಸೇರ್ಪಡೆಯಾಯಿತು. ಮತ್ತು ಲಿಯೋ ಕ್ಲಬ್ ನಿಂದ ಆಗುತ್ತಿರುವ ಸೇವಾ ಕಾರ್ಯಗಳು ಮತ್ತು ಅದರಿಂದ ಆಗುವ ಉಪಯೋಗಗಳನ್ನು ವಿವರಿಸಿದರು. ನಂತರ ಲಿಯೋ ಕ್ಲಬ್ ನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
    ಕಾರ್ಯಕ್ರಮದಲ್ಲಿ 2020- 21ರ ಕಾರ್ಯಚಟುವಟಿಕೆಗಳನ್ನು ಹಿಂದಿನ ಕಾರ್ಯದರ್ಶಿಗಳಾದ ಲಯನ್ ಅಶ್ವಥ್ ಹೆಗಡೆ ಮಂಡಿಸಿದರು. ನಿವೃತ್ತ ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್ ಕೆ.ಬಿ.ಲೋಕೇಶ ಹೆಗಡೆ ಸರ್ವರನ್ನೂ ಸ್ವಾಗತಿಸಿ ಕಳೆದ ಸಾಲಿನಲ್ಲಿ ಹಮ್ಮಿಕೊಂಡ ಸೇವಾಕಾರ್ಯಗಳಿಗೆ ನೆರವಾದ ಸರ್ವರನ್ನೂ ಸ್ಮರಿಸಿದರು.
    ಲಿಯೋ ಕ್ಲಬ್ಬಿನ ಕಳೆದ ಸಾಲಿನ ಕಾರ್ಯಚಟುವಟಿಕೆಗಳನ್ನು ಕಾರ್ಯದರ್ಶಿ ಲಿಯೋ ದರ್ಶನ್ ನಾಯಕ್ ಮಂಡಿಸಿದರು.
    2021-22 ನೇ ಸಾಲಿನ ಲಯನ್ಸ್ ಕ್ಲಬ್ ಪದಾಧಿಕಾರಿಗಳು: ಅಧ್ಯಕ್ಷರಾಗಿ ಎಂಜೆ.ಎಫ್. ಲಯನ್ CA ಉದಯ ಸ್ವಾದಿ, ಮೊದಲನೆಯ ಉಪಾಧ್ಯಕ್ಷರು ಎಂ.ಜೆ.ಎಫ್.ಲಯನ್ ತ್ರಿವಿಕ್ರಮ್ ಪಟವರ್ಧನ್, ಎರಡನೆಯ ಉಪಾಧ್ಯಕ್ಷರು ಲಯನ್ ಅಶ್ವತ್ಥ ಹೆಗಡೆ, ಕಾರ್ಯದರ್ಶಿ ಲಯನ್ Adv.ವಿನಯ್ ಹೆಗಡೆ, ಸಹಕಾರ್ಯದರ್ಶಿ ಲಯನ್ ರಮಾ ಪಟವರ್ಧನ್, ಖಜಾಂಚಿ ಲಯನ್ ಅನಿತಾ ಶ್ರೀಕಾಂತ್ ಹೆಗಡೆ, ಸಹ ಖಜಾಂಚಿ ಲಯನ್ ವಿನಾಯಕ್ ಭಾಗವತ್, ಎಲ್.ಸಿ.ಆಯ್.ಎಫ್.ಸಂಚಾಲಕರಾಗಿ ಲಯನ್ ಕೆ.ಬಿ. ಲೋಕೇಶ್ ಹೆಗಡೆ, ಸದಸ್ಯತ್ವ ಅಧ್ಯಕ್ಷರಾಗಿ ಎಂ.ಜೆ.ಎಫ್. ಲಯನ್ ಪ್ರಭಾಕರ್ ಹೆಗಡೆ, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಎಂ.ಜೆ.ಎಫ್. ಲಯನ್ ಜ್ಯೋತಿ ವಿ ಭಟ್,

    Club Marketing Communication Chairperson ಲಯನ್ ಗುರುರಾಜ್ ಹೊನ್ನಾವರ, ಲಯನ್ಸ ಕ್ವೆಸ್ಟ್ ನಿರ್ದೇಶಕರು, ಲಯನ್ ಪ್ರತಿಭಾ ಹೆಗಡೆ, ಲಯನ್ ಮಹಿಳಾ ಸಂಚಾಲಕಿ, ಲಯನ್ ಮಂಗಲಾ ಹೆಗಡೆ, Lion Tail Twister ಲಯನ್ ಶೀತಲ್ ಸ್ವಾದಿ, Lion Tamer ಲಯನ್ ಸಂತೋಷ್ ಹೆಗಡೆ, ಲಿಯೋ ಮಾರ್ಗದರ್ಶಕರಾಗಿ ಲಯನ್ ವಿನಯ್ ಹೆಗಡೆ ಮತ್ತು ಲಯನ್ ಅಶೋಕ್ ಹೆಗಡೆ.
    ಲಿಯೋ ಕ್ಲಬ್ ಸಿರ್ಸಿ ಪದಾಧಿಕಾರಿಗಳು: ಅಧ್ಯಕ್ಷರು ಲಿಯೋ ಸ್ಥುತಿ ತುಂಬಾಡಿ, ಉಪಾಧ್ಯಕ್ಷರು ಲಿಯೋ ಕ್ಷಿತಿ ಹೆಗಡೆ, ಕಾರ್ಯದರ್ಶಿ ಲಿಯೋ ವಾಸವಿ ಜೋಷಿ, ಸಹಕಾರ್ಯದರ್ಶಿ ಲಿಯೋ ಸಿಂಚನಾ ರಾಯ್ಕರ್, ಖಜಾಂಚಿ ಲಿಯೋ ತೈಬಾ ತಬುಸ್ಸಮ್, ಉಪ ಖಜಾಂಚಿ ಲಿಯೋ ಶ್ರೀ ಲಕ್ಷ್ಮಿ ಹೆಗಡೆ.
    ಲಿಯೋ ಕ್ಲಬ್ ಶ್ರೀನಿಕೇತನ ಶಿರಸಿ ಇದರ ಪದಾಧಿಕಾರಿಗಳು: ಅಧ್ಯಕ್ಷರು ಲಿಯೋ ಅವ್ಯಕ್ತ ಆರ್. ಹೆಗಡೆ, ಉಪಾಧ್ಯಕ್ಷರು ಲಿಯೋ ಸಮರ್ಥ ಜೋಶಿ, ಕಾರ್ಯದರ್ಶಿ ಸಿರಿ ಅಶೋಕ ಹೆಗಡೆ, ಸಹಕಾರ್ಯದರ್ಶಿ ಲಿಯೋ ವೈದೇಹಿ ಹೆಗಡೆ, ಖಜಾಂಚಿ ಲಿಯೋ ಅಪೂರ್ವ ಗುರುರಾಜ್ ಹೊನ್ನಾವರ್, ಉಪ ಖಜಾಂಚಿ ಲಿಯೋ ಸಾಕ್ಷಿ ಹೆಗಡೆ.
    ಲಯನ್ಸ ಕ್ಲಬ್ ನೂತನ ಅಧ್ಯಕ್ಷರಾದ ಎಂ.ಜೆ.ಎಫ್.ಲಯನ್ ಉದಯ ಸ್ವಾದಿ ಪ್ರಸ್ತುತ ವರ್ಷದಲ್ಲಿ ಬಹಳಷ್ಟು ಮಾದರಿ ಹಾಗೂ ಸ್ಮರಣಾರ್ಹ ಸೇವಾ ಕಾರ್ಯ ನಡೆಸುವದಾಗಿ ಆಶಯ ನುಡಿದರು. ನೂತನ ಪದಾಧಿಕಾರಿಗಳಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪ್ರೊ. ಎನ್.ವಿ.ಜಿ ಭಟ್ ಹಾಗೂ ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ರೋಟೇರೀಯನ್ ಪಾಂಡುರಂಗ ಪೈ ಶುಭ ಹಾರೈಸಿದರು. ಲಿಯೋ ಶ್ರೀನಿಕೇತನ ಕುರಿತು ಲಯನ್ ಅಶೋಕ ಹೆಗಡೆ ಮಾತನಾಡಿದರು. ಲಯನ್ ಶ್ರೀಕಾಂತ ಹೆಗಡೆ ನೂತನ ಪದಾಧಿಕಾರಿಗಳ ಪರಿಚಯಿಸಿದರು. ಲಯನ್ ಅನಿತಾ ಶ್ರೀಕಾಂತ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಲಯನ್ ವಿನಯ್ ಹೆಗಡೆ ವಂದಿಸಿದರು. ಪ್ರೊ.ರವಿ ನಾಯಕ್ ಹಾಗೂ ಲಯನ್ ಪ್ರತಿಭಾ ಹೆಗಡೆ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top