ಅಂಕೋಲಾ: ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಮುಗ್ಧ ಜನರಿಗೆ ವಂಚಿಸಿ ಗ್ರಾಹಕರಿಂದ ಎ.ಟಿ.ಎಮ್ ಕಾರ್ಡ ಪಡೆದುಕೊಂಡು ಅವರ ಹಣವನ್ನು ಮೋಸದಿಂದ ಪಡೆದುಕೊಳ್ಳುತ್ತಿದ್ದ ಆರೋಪಿ ವಿಜಯ್ ಅಂಗದಪ್ರಸಾದ ದ್ವಿವೇದಿ ಈತನನ್ನು ಪತ್ತೆ ಹಚ್ಚಿ ಬಂಧಿಸಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಅಂಕೋಲಾ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೆ.ಸಿ ರಸ್ತೆಯಲ್ಲಿನ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಮ್ ದಲ್ಲಿ ಡಿ.21 ರಂದು ಮಧ್ಯಾಹ್ನ 12:30 ಯಿಂದ 1ಗಂಟೆಯ ಅವಧಿಯಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಅಂಕೋಲಾ ಬೋಳೆ ನಿವಾಸಿ ವಿಜೇತ ಕಿಶೋರ ನಾಯಕ ಇತನಿಗೆ ವಂಚಿಸಿ ಇತನ ಕೈಯಲ್ಲಿದ್ದ ಎ.ಟಿ.ಎಮ್ ಕಾರ್ಡನ್ನು ಯಾರೋ ಅಪರಿಚಿತರು ವಂಚಿಸಿ ಪಡೆದುಕೊಂಡು ಆನಂತರದಲ್ಲಿ ಬೇರೆ ಬ್ಯಾಂಕಿನ ಎ.ಟಿ.ಎಮ್ ನಿಂದ ಕಿಶೋರ ನಾಯಕ ರವರ ಅಂಕೌಟ್ ನಿಂದ 44,000 ರೂ ಹಣವನ್ನು ತೆಗೆದುಕೊಂಡ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಡಿ.28 ರಂದು ಪ್ರಕರಣ ದಾಖಲಾಗಿದ್ದು, ಈತನನ್ನು ಮುಂಬೈ ಕುರ್ಲಾ ಸಾಕಿನಾಕಾದಲ್ಲಿ ವಶಕ್ಕೆ ಪಡೆದು, ದಸ್ತಗಿರಿ ಮಾಡಿ ತನಿಖೆ ಕೈಗೊಂಡ ಪೊಲೀಸರಿಂದ ಆರೋಪಿತನು ಅಂಕೋಲಾದಲ್ಲಿ ಅಲ್ಲದೇ ಶಿರಸಿ ಸೇರಿದಂತೆ ರಾಜ್ಯದ ಇತರೇ ಕಡೆಗಳಲ್ಲಿಯೂ ಸಹ ಇದೇ ಮಾದರಿಯ ಕೃತ್ಯ ಎಸಗಿರುವ ಬಗ್ಗೆ ತಿಳಿದು ಬಂದಿದ್ದು,ದಸ್ತಗಿರಿ ಮಾಡಿದ ಆರೋಪಿತನಿಂದ ಒಟ್ಟು 42,000 ರೂ ಹಾಗೂ ಕೃತ್ಯ ಮಾಡಲು ಬಳಸಿರುವ ಕಾರ್ ನಂ. MH-03 HC 1047 ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.