• Slide
  Slide
  Slide
  previous arrow
  next arrow
 • ಹರ್ಷನ ಹತ್ಯೆ ಪ್ರಕರಣವನ್ನು ತನಿಖಾ ದಳಕ್ಕೆ ವರ್ಗಾಯಿಸುವಂತೆ ಪ್ರತಿಭಟನೆ; ಮುಖ್ಯಮಂತ್ರಿಗೆ ಮನವಿ

  300x250 AD

  ಕುಮಟಾ: ಹಿಂದೂ ಕಾರ್ಯಕರ್ತ ಹರ್ಷರವರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕು ಮತ್ತು ಇದೊಂದು ಭಯೋತ್ಪಾಧನಾ ಕೃತ್ಯ ಎಂದು ಪರಿಗಣಿಸಿ, ಗಂಭೀರವಾಗಿ ತನಿಖೆ ಮಾಡಿ, ತಪ್ಪಿತಸ್ತರಿಗೆ ಶೀಘ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಇಂದು ಕುಮಟಾದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು.

  ಫೆ. ೨೦ ರಂದು ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷರವರ ಹತ್ಯೆ ಮಾಡಿದ ಪ್ರಕರಣವು ಅತ್ಯಂತ ಗಂಭೀರ ಪ್ರಕರಣವಾಗಿದೆ. ಇದು ಕೇವಲ ಒಂದು ಕೊಲೆಯಲ್ಲದೇ ಇದೊಂದು ಭಯೋತ್ಪಾದನಾ ಕೃತ್ಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದುವರೆಗೆ ಕರ್ನಾಟಕ ರಾಜ್ಯದಲ್ಲಿ ೩೫ ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆದಿದೆ. ಈ ಎಲ್ಲ ಹತ್ಯೆಗಳನ್ನು ಒಂದೇ ಸಮುದಾಯಕ್ಕೆ ಸೇರಿದವರು ಮಾಡಿದ್ದಾರೆ. ಹಿಂದೂ ಕಾರ್ಯಕರ್ತ ಹರ್ಷ ಸೇರಿ, ಎಲ್ಲ ಹಿಂದೂ ಕಾರ್ಯಕರ್ತರನ್ನು ಹಿಂದೂತ್ವದ ಕಾರ್ಯ ಮಾಡುತ್ತಿದ್ದರು ಎನ್ನುವ ಒಂದೇ ಕಾರಣಕ್ಕಾಗಿ ಅವರ ಹತ್ಯೆ ಮಾಡಲಾಗಿದೆ.

  ಈ ಹಿಂದೆ ನಡೆದ ಎಲ್ಲ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದಲ್ಲಿ ಒಂದೇ ಗುಂಪು, ಒಂದೇ ಸಂಘಟನೆಯ ಸದಸ್ಯರು ಮತ್ತು ಒಂದೇ ಮಾದರಿಯಲ್ಲಿ ಹತ್ಯೆ ಮಾಡಿರುವುದು ಗಮನಕ್ಕೆ ಬರುತ್ತಿದೆ. ಅಷ್ಟೇಅಲ್ಲದೇ ಹಿಂದಿನ ಹಿಂದೂ ಕಾರ್ಯಕರ್ತರ ಹತ್ಯೆಯ ಅಪರಾಧದ ತನಿಖಾ ವರದಿಯನ್ನು ಗಮನಿಸಿದಾಗ, ಭಾರತದಲ್ಲಿ ಇಸ್ಲಾಮಿಕ್ ಶಾಸನ ತರಲು ಮತಾಂಧ ಸಂಘಟನೆ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ದೇಶದಲ್ಲಿ ಹಿಂದೂ ನಾಯಕರ ಬರ್ಬರ ಹತ್ಯೆ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ ಮತ್ತು ಬಹುತಾಂಶ ಪ್ರಕರಣದಲ್ಲಿ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಹೆಸರು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

  ಅದಲ್ಲದೇ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಬಲವಂತದ ಮತಾಂತರ, ಭಯೋತ್ಪಾದನೆ ತರಬೇತಿ, ಅಕ್ರಮ ಹಣ ವರ್ಗಾವಣೆ, ಕಪ್ಪುಹಣ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ದಂಗೆ ಮಾಡುವುದು, ಕೋಮು ಗಲಭೆ ಮಾಡುವುದು ಮುಂತಾದ ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದೆ. ಅವರ ದ್ಯೇಯಕ್ಕೆ ಅಡ್ಡ ಬರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಮಾಡುತ್ತಿದೆ. ಇದು ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಮಾತ್ರವಲ್ಲದೇ, ದೇಶದ ಸುರಕ್ಷತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಸಮಾಜದಲ್ಲಿ ಅಶಾಂತಿಯನ್ನು ಹರಡುವ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಮೇಲೆ ನಿಷೇಧವನ್ನು ಹಾಕಬೇಕು. ಹರ್ಷರವರ ಹತ್ಯೆ ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ನೀಡುವ ದೃಷ್ಟಿಯಿಂದ ತ್ವರಿತ ಪ್ರಯತ್ನ ಮಾಡಬೇಕು.

  300x250 AD

  ಹರ್ಷರವರ ಹತ್ಯಾ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ಮತ್ತು ಕೊಕಾ ಕಾಯಿದೆಯನ್ನು ಹಾಕಿ, ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯನ್ನು ಒಪ್ಪಿಸಬೇಕು. ಇದಲ್ಲದೇ ಈಗಲೂ ಸಹ ಅನೇಕ ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಕೂಡಲೇ ಸರ್ಕಾರವು ಉಳಿದ ಹಿಂದೂ ಕಾರ್ಯಕರ್ತರರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಲಾಯಿತು.

  ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಾಯ್ಕ್ , ತಾಲೂಕ ಅಧ್ಯಕ್ಷರಾದ ರೋಹಿದಾಸ್ ಗಾವಡಿ , ಹಿಂದೂ ಜಾಗರಣ ವೇದಿಕೆಯಿಂದ ಭಾಸ್ಕರ ನಾಯ್ಕ್, ವಿವೇಕ್ ನಾಯ್ಕ್, ಬಿಜೆಪಿ ತಾಲೂಕ ಮಂಡಲ ಅಧ್ಯಕ್ಷರಾದ ಹೇಮಂತ್ ಗಾವಕರ್, ಕುಮಾರ ಮಾರ್ಕಡೆಯಾ, ಹಿಂದೂ ಜನಜಾಗೃತಿ ಸಮಿತಿಯ ಸತೀಶ್ ಶೇಟ್, ಸಂದೀಪ್ ಭಂಡಾರಿ, ಸೌ ಗೀತಾ ಶಾನಭಾಗ, ಧರ್ಮಪ್ರೇಮಿ ಗಳಾದ ಚೈತನ್ಯ ಆಚಾರಿ, ನಾಗೇಂದ್ರ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top