ಶಿರಸಿ: ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಇಂದು ಅಭಿನಂದನಾ ಕಾರ್ಯಕ್ರಮ ನಡೆಯಿತು.
ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯಾದ ಪರಮೇಶ್ವರ ಚಂದ್ರಶೇಖರ ಹೆಗಡೆ ಕಿಬ್ಬಳ್ಳಿ ಇವರು ದತ್ತಿ ನಿಧಿ ಸ್ಥಾಪಿಸಿ ಬಡ್ಡಿ ಹಣದಲ್ಲಿ ವಿಶೇಷ ಚೇತನ ಹಾಗೂ ಅರ್ಹ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ತುಂಬಲು ಹಣ ನೀಡಿದ್ದರು. ಕಾರಣ ಇಂದು ಪರಮೇಶ್ವರ ಹೆಗಡೆ ಇವರ ತಂದೆ ತಾಯಿಯರನ್ನು ಕರೆಸಿ ಗೌರವಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಭಟ್ ಡೂಂಬೆಸರ ಮಾತನಾಡಿ ದತ್ತಿನಿಧಿ ಇಟ್ಟ ಉದ್ದೇಶ ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಎಸ್. ಎಂ. ಹೆಗಡೆ ಹುಡೇಲಕೊಪ್ಪ ಮಾತನಾಡಿ ಹಳೆಯ ವಿದ್ಯಾರ್ಥಿಗಳೇ ಶಾಲೆಯ ಬೆನ್ನೆಲುಬು ಎನ್ನುವ ಮೂಲಕ ಕಲಿತ ಶಾಲೆ ನೆನಪಿಸಿಕೊಂಡು ದತ್ತಿ ನಿಧಿ ಇಟ್ಟ ಪರಮೇಶ್ವರ ಹೆಗಡೆ ಯವರಿಗೆ ಧನ್ಯವಾದ ಗಳನ್ನು ಸಲ್ಲಿಸಿದರು.
ವೇದಿಕೆಯ ಸರೋಜಿನಿ ಭಟ್ ಹಾಗೂ ಶ್ರೀಧರ ನಾಯಕ ಎಕ್ಕಂಬಿ ಇದ್ದರು. ಸಂಸ್ಥೆಯ ನಿರ್ದೇಶಕ ರು ಹಾಗೂ ದತ್ತಿ ನಿಧಿ ಕೊಡಿಸುವಲ್ಲಿ ಸಹಕರಿಸಿದ ಜಿ.ಎಂ.ಹೆಗಡೆ ಹಾಜರಿದ್ದರು. ಶಿಕ್ಷಕಿ ಸವಿತಾ ಭಟ್ ನಿರ್ವಹಣೆ ಮಾಡಿದರೆ ಶಿಕ್ಷಕ ಗಣೇಶ ಸಾಯಿಮನೆ ವಂದಿಸಿದರು.