ಶಿರಸಿ: ಪವಿತ್ರವಾದ ವೃತ್ತಿ ಕ್ಷೇತ್ರಗಳಲ್ಲಿ ಶಿಕ್ಷಕ ವೃತ್ತಿಯೂ ಒಂದು. ಪ್ರಾದ್ಯಾಪಕರುಗಳ ನಿವೃತ್ತಿ ನಮ್ಮ ಸಂಸ್ಥೆಗೆ ತುಂಬಲಾರದ ನಷ್ಟ, ನಮ್ಮ ಸಂಸ್ಥೆಯನ್ನು ಉತ್ತಮ ಮಟ್ಟದಲ್ಲಿಯೇ ಮುನ್ನಡೆಸುವ ಜವಾಬ್ದಾರಿ ಇದ್ದು ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಎಂದು ಎಂ ಇ ಎಸ್ ನ ಗೌರವ ಪ್ರಧಾನ ಕಾರ್ಯದರ್ಶಿ ಎಸ್ ಪಿ ಶೆಟ್ಟಿಯವರು ಹೇಳಿದರು.
ಇಂದು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ ಕೋಮಲಾ ಭಟ್ ಅವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕೋಮಲಾ ಭಟ್ ಅವರು ಪ್ರಾಚಾರ್ಯೆಯಾಗಿ ೯ ತಿಂಗಳ ಅವಧಿಯಲ್ಲಿ ಎಲ್ಲರೂ ಮೆಚ್ಚುವ ಹಾಗೆ ಕಾರ್ಯನಿರ್ವಹಿಸಿದ್ದಾರೆ. ಕೆಲಸಮಾಡುವ ತುಡಿತ ಕ್ರಿಯಾಶೀಲ ಗುಣ ಅವರಲ್ಲಿ ಇದ್ದ ಕಾರಣ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಿದರು ಎಂದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೋಮಲಾ ಭಟ್ ಇಂದು ನನ್ನ ಮನೆಯಿಂದ ದೂರ ಹೋಗುತ್ತಿದ್ದೆನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಮನಸ್ಸನ್ನು ಗಟ್ಟಿಮಾಡಿಕೊಂಡರೂ ಭಾವುಕತೆ ಉಮ್ಮಿಳಿಸಿದೆ.ನಿವೃತ್ತಿ ನಂತರ ಸುಮ್ಮನೆ ಕೂರದೆ ಚಟುವಟಿಕೆಯಿಂದ ಜೀವನ ಮುಂದುವರೆಸುವ ಉದ್ದೇಶ ಇದೆ. ನನ್ನಿಂದ ಸಮಾಜಕ್ಕೆ ಹೆಚ್ಚಿನ ಕೊಡುಗೆ ನಿಡುತ್ತೆನೆ ಎಂದರು.
ಇದೆ ಸಂದರ್ಭದಲ್ಲಿ ಕಾಲೇಜಿನಲ್ಲಿ ನಕ್ಷತ್ರವನ ನಿರ್ಮಾಣ ನಿರ್ವಹಣೆಗೆ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಎಂ ಇ ಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಸುಧೀರ್ ಭಟ್, ಸದಸ್ಯರಾದ ಲೋಕೇಶ್ ಹೆಗಡೆ, ವರೇಂದ್ರ ಕಾಮತ್, ಪ್ರಾಚಾರ್ಯ ಡಾ ಟಿ ಎಸ್ ಹಳೇಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಪ್ರೊ ರವಿ ಕೋಳೆಕರ್ ಸ್ವಾಗತಿಸಿ,ನಿರೂಪಿಸಿದರು, ಪ್ರೊ ಕೆ ಜಿ ಭಟ್ ವಂದಿಸಿದರು.