ಯಲ್ಲಾಪುರ:ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಇಂದು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಡೆಯಿತು.
ಶಿಕ್ಷರಾದ ವಿಶ್ವೇಶ್ವರ ಗಾಂವ್ಕರ್ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಪ್ರಾಚಿನ ಕಾಲದಿಂದ ರೂಢಿಯಲ್ಲಿರುವ ಸಂಪ್ರದಾಯಗಳೆಲ್ಲವೂ ವೈಜ್ಞಾನಿಕ ಆಧಾರಗಳನ್ನು ಹೊಂದಿದೆ. ಈಗಿನ ತಲೆಮಾರಿನವರು ಅವುಗಳ ಕುರಿತು ಅರಿವು ಹೊಂದಬೇಕು ಎಂದರು.
ಇನ್ನೋರ್ವ ಶಿಕ್ಷಕರಾದ ರಾಘವೇಂದ್ರ ಹೆಗಡೆ ಮಾತನಾಡಿ, ಭೂಮಿಯ ಮೇಲೆ ನಡೆಯುವ ಪ್ರತಿ ಘಟನೆಗೂ ವೈಜ್ಞಾನಿಕ ಕಾರಣಗಳಿವೆ. ವಿಜ್ಞಾನದ ಆವಿಷ್ಕಾರಗಳೇ ಬದುಕಿನ ರೀತಿಯನ್ನು ಬದಲಾಯಿಸಿದೆ ಎಂದು ಹೇಳಿದರು.
ಶಿಕ್ಷಕರಾದ ನವಿನಾ ಗುನಗಾ ಕಾರ್ಯಕ್ರಮದಲ್ಲಿದ್ದರು. ಶಿಕ್ಷಕರಾದ ಲತಾ ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಡಾ. ನವೀನಕುಮಾರ ಎಜಿ ವಂದಿಸಿದರು. ಈ ವೇಳೆ ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ಪ್ರಯೋಗಗಳನ್ನು ಮಾಡಿ ಪ್ರದರ್ಶಿಸಿದರು.