ಶಿರಸಿ: ಇಲ್ಲಿಯ ಟಿ.ಆರ್.ಸಿ ಸಭಾಭವನದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಮತ್ತು ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಸಂಯುಕ್ತವಾಗಿ ಏರ್ಪಡಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮ ಬೇಂದ್ರೆ ನಮನವು ಜನಮನ ಸೊರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
‘’ಬೇಂದ್ರೆ ನಮನದ ಆರಂಭಿಕ ಕಾರ್ಯಕ್ರಮವಾಗಿ ಬೇಂದ್ರೆಯವರ ಸಾಹಿತ್ಯದ ಆಯ್ದ ಕೃತಿಯನ್ನು ಆಯ್ದುಕೊಂಡು ಭೂಮಿ ದಿನೇಶ ಶಿರಸಿ, ಅಮೃತಾ ಹೆಗಡೆ, ಅನಘಾ ಹೆಗಡೆ, ಪ್ರಿಯಾಂಕಾ ಹೆಗಡೆ, ರುಚಿತಾ ಹೆಗಡೆ, ಸ್ಪೂರ್ತಿ ಹಲಸನಹಳ್ಳಿ, ಸ್ಪಂದನಾ ಹುತ್ಗಾರ, ರವರು ಸುಮಧುರವಾಗಿ ಹಾಡಿದರು. ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ, ಡೋಲಕ್‍ನಲ್ಲಿ ಕಿರಣ ಹೆಗಡೆ ಕಾನಗೋಡ ಸಹಕರಿಸಿದರು.
ದ್ವೀತೀಯ ಪ್ರಸ್ತುತಿಯಾಗಿ ಬೇಂದ್ರೆ ಸಾಹಿತ್ಯ ಕೃತಿಯಲ್ಲಿ ಸ್ನೇಹಾ ಅಮ್ಮಿನಳ್ಳಿ, ಮಧುಶ್ರೀ ಶೇಟ್, ಸಂಪದಾ ಸತೀಶ, ಶೃತಿ ಭಟ್ಟ ಬೆಂಗಳೂರು ಹಾಗೂ ಧನ್ಯ ಹೆಗಡೆಯವರು ನಾಲ್ಕು ಕೃತಿಗಳನ್ನು ಸೊಗಸಾಗಿ ಹಾಡಿದರು. ತಬಲಾದಲ್ಲಿ ಕಿರಣ ಕಾನಗೋಡ, ಹಾಗೂ ವಿಜಯೇಂದ್ರ ಹೆಗಡೆ ಅಜ್ಜೀಬಳ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ ಸಹಕರಿಸಿದರು.
ಮೂರನೇ ಪ್ರಸ್ತುತಿಯಾಗಿ ಖ್ಯಾತ ಗಾಯಕಿ ಶ್ರೀಮತಿ ರೇಖಾ ದಿನೇಶರವರು ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಜೋಗ್‍ನಲ್ಲಿ ಬೇಂದ್ರೆಯವರ ಕೃತಿಯ ಚೀಜ್ ಆದ ಇಂದಿನ ದಿನ ಆನಂದ. ಹಾಗೂ ಅಂಬಿಕಾ ತನಯ ಕಟ್ಟಿದ ಗಾಥಾ ಬಂದೀಶ್‍ನ್ನು ಸುಧ್ರಾವ್ಯವಾಗಿ ವಿಸ್ತಾರಗೊಳಿಸಿದರು. ತದನಂತರದಲ್ಲಿ ತಾವೇ ಸ್ವತಃ ರಾಗ ಸಂಯೋಜಿಸಿದ ಶಂಕರ ಶುಭಂಕರವನ್ನು ಹಾಡುತ್ತ ಕೊನೆಯಲ್ಲಿ ರಾಗ್ ಭೈರವಿಯಲ್ಲಿ ಬೇಂದ್ರೆ ಕೃತಿಗಳನ್ನು ಪ್ರಸ್ತುತಗೊಳಿಸಿ ಬೇಂದ್ರೆ ನಮನ ಕಾರ್ಯಕ್ರಮ ಸಮಾಪ್ತಿಗೊಳಿಸದರು.
ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ,ಸಹಕರಿಸಿದರು. ಮೊದಲ ಪ್ರಸ್ತುತಿಯ ನಂತರ ವಿಶೇಷ ಕಾರ್ಯಕ್ರಮವಾಗಿ ಬೇಂದ್ರೆ ದರ್ಶನ’ ರೂಪಕವನ್ನು ಧಾರವಾಹಿಯ ಹಿರಿಯ ಕಲಾವಿದ ಅನಂತ ದೇಶಪಾಂಡೆಯವರು ಸೊಗಸಾಗಿ ನಡೆಸಿಕೊಟ್ಟರು.