ಶಿರಸಿ: ಅರ್ಥಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಕರಾದ ಡಾ.ಎಸ್.ಕೆ.ಹೆಗಡೆ ಇವರು ಡಾ. ಟಿ.ಎಸ್. ಹಳೆಮನೆ ಇವರಿಂದ ಇಂದು ಶಿರಸಿಯ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾವಿದ್ಯಾಲಯದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಹಿತಾಸಕ್ತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಮಹಾವಿದ್ಯಾಲಯದ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶೆಟ್ಟಿ, ಖಜಾಂಚಿ ಸುಧೀರ ಭಟ್ಟ, ಉಪಸಮಿತಿಯ ಅಧ್ಯಕ್ಷ ವರೀಂದ್ರ ಕಾಮತ, ಪ್ರಾಧ್ಯಾಪಕ ವರ್ಗದವರು ಹಾಗೂ ಕಛೇರಿಯ ಅಧೀಕ್ಷಕರಾದ ಮೈಲಾರೆಪ್ಪ ಮತ್ತು ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.