• Slide
    Slide
    Slide
    previous arrow
    next arrow
  • ಲಯನ್ಸ್ ಕ್ಲಬ್‍ನಿಂದ ಆಟೋರಿಕ್ಷಾಗಳ ಬೃಹತ್ ಮಾಲಿನ್ಯ ತಪಾಸಣಾ ಶಿಬಿರ

    300x250 AD

    ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ಶಿರಸಿಯ ಆಟೋರಿಕ್ಷಾಗಳಿಗೆ ಬೃಹತ್ ಮಾಲಿನ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

    ಬನವಾಸಿ ರಸ್ತೆಯ ಖುಷಿ ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಈ ಕಾರ್ಯಕ್ರಮ ಜರುಗಿತು. ಪ್ರಾದೇಶಿಕ ಸಾರಿಗೆ ಆಯುಕ್ತರಾದ ಲಯನ್ ಸಿ.ಡಿ.ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕ ಸುರಕ್ಷತೆಗಾಗಿ ಸಾರಿಗೆ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ ಎಂದು ನುಡಿದರು.

    ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್.ಲಯನ್ ಉದಯ ಸ್ವಾದಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಮಾಣಪತ್ರಗಳನ್ನು ವಿತರಿಸಿದರು.

    300x250 AD

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿರಸಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷರು ಹಾಗೂ ಶಿರಸಿ ಅಟೋರಿಕ್ಷಾ ಮಾಲಕರ ಸಂಘದ ಆಧ್ಯಕ್ಷರಾದ ಉಪೇಂದ್ರ ಪೈ , ಸೀನಿಯರ್ ಚೆಂಬರ್ ಶಿರಸಿ ವಿಭಾಗದ ಅಧ್ಯಕ್ಷರಾದ ಲಯನ್ ಸೀನಿಯರ್ ಮಲ್ಲಿಕಾರ್ಜುನ ನೆಜ್ಜೂರ್, ಮಾಲಿನ್ಯ ನಿಯಂತ್ರಣ ವಿಭಾಗದ ಜಿಲ್ಲಾ ಮುಖ್ಯಸ್ಥರಾದ ಲಯನ್ ಗುರುರಾಜ ಹೊನ್ನಾವರ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ವಿನಯ ಹೆಗಡೆ ಬಸವನಕಟ್ಟೆ, ಕೋಶಾಧ್ಯಕ್ಷರಾದ ಲಯನ್ ಅನಿತಾ ಹೆಗಡೆ, ಶಿರಸಿ ಲಯನ್ಸ ಕ್ಲಬ್ ಸದಸ್ಯರಾದ ಲಯನ್ ಶ್ರಿಕಾಂತ ಹೆಗಡೆ, ಲಯನ್ ನಾಗರಾಜ ಹೆಗಡೆ, ಲಯನ್ ಪ್ರದೀಪ ಎಲ್ಲನಕರ, ಲಯನ್ ಶ್ಯಾಮಸುಂದರ ಭಟ್ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top