ಕುಮಟಾ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ‘ಅರಣ್ಯವಾಸಿಗಳನ್ನ ಉಳಿಸಿ’ – ಜಾಥಕ್ಕೆ ಇಂದು ತಾಲೂಕಿನಲ್ಲಿ ಸಹಸ್ರಾರು ಅರಣ್ಯವಾಸಿಗಳು ವಿಶೇಷ ರೀತಿಯಲ್ಲಿ ವಿನ್ಯಾಸದೊಂದಿಗೆ ರಚಿತಗೊಂಡ ಹೋರಾಟದ ವಾಹಿನಿಯೊಂದಿಗೆ, ವಿವಿಧ ರೀತಿಯ ಸಾಂಸ್ಕ್ರತಿಕ ತಂಡ, ಘೋಷಣೆಯೊಂದಿಗೆ ಅದ್ದೂರಿಯಾಗಿ ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳು ಚಾಲನೆ ನೀಡಿದರು.
ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಆಶ್ರಯದಲ್ಲಿ ಇಂದು ಕುಮಟ ತಾಲೂಕಿನ ಮಾಸ್ತಿಕಟ್ಟಾ ದೇವಾಲಯದ ಸರ್ಕಲ್‍ನಿಂದ ಜಾಥವು ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು.
ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹನ 500 ಹಳ್ಳಿಗಳಿಗೆ ಮುಂದಿನ 30 ದಿನಗಳಲ್ಲಿ ತಿರುಗಾಟ ಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹನ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಆರಂಭಗೊಂಡವು.
ಜಾಥದ ನೇತ್ರತ್ವವನ್ನ ಹೋರಾಟ ಸಮಿತಿಯ ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಜಿ.ಎಮ್ ಶೆಟ್ಟಿ ಅಂಕೋಲಾ, ಅಂಕೋಲಾ ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ದೇವರಾಜ ಗೊಂಡ, ಪಧಾದಿಕಾರಿಗಳಾದ ಸುರೇಶ ಬೆಟ್ಕುಳಿ, ಯಾಕೂಬ, ರಾಜೇಶ ಮಿತ್ರ ನಾಯ್ಕ, ಚಂದ್ರಕಾಂತ ಕೊಚರೆಕರ, ಸಂದೇಶ ನಾಯ್ಕ ಬ್ರಹ್ಮಾವರ, ಸಾರಂಬಿ ಬೆಟ್ಕುಳಿ, ಸುರೇಶ ಪಟಗಾರ, ಸೀತಾರಾಮ ಬೋಗ್ರಿಬೈಲ್, ವೆಂಕಟೇಶ ನಾಯ್ಕ, ಶ್ರೀಧರ ಭಟ್, ರಿಜವಾನ ಭಟ್ಕಳ, ಶಬ್ಬೀರ್ ಭಟ್ಕಳ, ವಿನೋಧ ನಾಯ್ಕ ಹೊನ್ನಾವರ, ನಾಗಪತಿ ಗೌಡ, ಸೀತರಾಮ ಗೌಡ ನೀರಗಾನ, ಆರ್ ಹೆಚ್ ನಾಯ್ಕ ಹೊನ್ನಾವರ ಮುಂತಾದವರು ಉಪಸ್ಥಿತರಿದ್ದರು.