ಶಿರಸಿ:ಇಂದಿನ ಪೇಸ್‍ಬುಕ್ ಜಾಲತಾಣದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಹವ್ಯಕ ಗ್ರೂಪ್ ನಾವು ನಮ್ಮಿಷ್ಟ ಸರಿ ಸುಮಾರು ನಾಲ್ಕುವರೆ ಸಾವಿರ ಸದಸ್ಯರನ್ನು ಹೊಂದಿದ್ದು ಈ ಗ್ರೂಪ್ ನಿಂದ ಶಿರಸಿಯ ಅಪೋಲೋ ಇಂಟರನ್ಯಾಶನಲ್ ಸಭಾಭವನದಲ್ಲಿ ಗೆಟ್ ಟುಗೆದರ್ ಕಾಯಕ್ರಮ ಆಯೋಜಿಸಲಾಗಿದ್ದು, ಗ್ರೂಪ್ ಸದಸ್ಯ ಹಾಗೂ ವಿವಿಧ ಚಟುವಟುಕೆಗಳ ಮೂಲಕ ಕ್ರಿಯಾಶೀಲವಾಗಿರುವ ಗಿರಿಧರ ಕಬ್ನಳ್ಳಿ ಮತ್ತು ಕಳೆದ 50 ವರ್ಷಗಳಿಂದ ಹವ್ಯಕ ಅಡುಗೆ ಪದ್ಧತಿಯಲ್ಲಿ ಸಾಧನೆ ಮಾಡುತ್ತಿರುವ ಬೆಂಡೆಗದ್ದೆ ಗಣಪತಿಯವರನ್ನು ಫಲ ತಾಂಬೂಲ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.
ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಯಮಿ ಶ್ರೀಕಾಂತ ಭಟ್ಟರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಗ್ರೂಪ್ ನ ಕಾರ್ಯಚಟುವಟಿಕೆ ಹಾಗೂ ಆಗಾಗ ನಡೆಸುವ ಸಮ್ಮೇಳನದಂತಹ ವಿನೂತನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಎಸಿಎಪ್ ಅಶೋಕ ಭಟ್ ,ಅಡ್ಮಿನ್ ಬಳಗದ ಸಾವಿತ್ರಿ ರಮೇಶ ಉಪಸ್ಥಿತರಿದ್ದರು.
ಸನ್ಮಾನ ಪಡೆದ ಗಿರಿಧರ ಕಬ್ನಳ್ಳಿ ಮಾತನಾಡಿ ಕೃತಜ್ನತೆ ಹೇಳಿದರು.
ಕಾರ್ಯಕ್ರಮದಲ್ಲಿ ಶಿರಸಿಯ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಪ್ರಭಾಕರ ಹೆಗಡೆ ಮತ್ತು ಸದಸ್ಯೆ ಸುಜಾತಾ ದಂಟ್ಕಲ್ ಸನ್ಮಾನ ಪತ್ರ ವಾಚಿಸಿದರು. ಗ್ರೂಪ್ ಅಡ್ಮಿನ್ ಬಳಗದ ಸೂರ್ಯ ನಾರಾಯಣ ಹೆಗಡೆ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ರೋ. ಗಣೇಶ ಕೂರ್ಸೆ ಕಾರ್ಯಕ್ರಮ ನಿರೂಪಿಸಿದರು.