ಶಿರಸಿ: ಶಾಸ್ತ್ರೀಯ ಸಂಗೀತದ ರಾಗ ವಿನ್ಯಾಸಗಳು ನಮ್ಮ ಮನಸ್ಸಿನ ದುರಾಲೋಚನೆಗಳನ್ನು ಹೋಗಲಾಡಿಸುತ್ತದೆ. ಕಲಾವಿದರು ಸಂಗೀತದ ಪ್ರಕಾರದಲ್ಲಿ ಆಲವಾಗಿ ಅಭ್ಯಾಸ ನಡೆಸಿದರೆ ಜೀವನದ ಅತ್ಯಂತ ಯಶಸ್ಸಿನ ಗುರಿ ಮುಟ್ಟಲು ಹೆಚ್ಚಿನ ಸಹಾಯ ಆಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ ತಾಳಮದ್ದಲೆ ಅರ್ಥದಾರಿಗಳಾದ ವಿ. ಉಮಾಕಾಂತ ಭಟ್ ಕೆರೆಕೈ ಹೀಪನಳ್ಳಿಯ ಚೈತನ್ಯ ಸಂಗೀತ ವಿದ್ಯಾಲಯದ 17 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತಿದ್ದರು.
ಸಂಗೀತದಲ್ಲಿ ಮಾತ್ರ ಇಂದು ಗುರುಕುಲ ಪದ್ದತಿ ನಡೆದುಕೊಂಡು ಬರುತ್ತಿದ್ದು ಇದು ಮತ್ತೆಲ್ಲೂ ಸಿಗಲಾರದು. ಸಂಗೀತದಲ್ಲಿ ಸಾಹಿತ್ಯವಿದೆ ಅದಕ್ಕೊಂದು ಅರ್ಥಪೂರ್ಣವಾದ ಚೀಜ್ ಗಳಿವೆ ಮನುಷ್ಯನ ಮನಸ್ಥಿತಿಯನ್ನು ಹತೋಟಿಯಲ್ಲಿಡುವ ಅದ್ಭುತವಾದ ಶಕ್ತಿ ಇದೆ ಎನ್ನುತ್ತಾ ಪ್ರತಿಯೊಂದು ಆರಂಭಕ್ಕೆ ಮೂಲ ಸಂಗೀತವಾಗಿದ್ದು ಇಲ್ಲಿ ರಾಗ ತಾಳ ಲಯವನ್ನು ಅರುಹುವ ಹಾಗೂ ಅಭ್ಯಸಿಸುತ್ತಿರುವ ಕಲಾವಿದರನ್ನು ಮೇಲಕ್ಕೆತ್ತುವ ಅಗಾಧ ಶಕ್ತಿ ಇದೆ ಸಂಗೀತದ ಆರೋಹ ಅವರೋಹಕ್ಕೆ ಹಿರಿಯ ಅನುಭವಿಗಳಿಂದ ಮಾರ್ಗದರ್ಶನ ದೊರೆತಾಗ ಸಾರ್ಥಕತೆಯನ್ನು ನೀಡುತ್ತದೆ ಎಂದರು.
ಇನ್ನೊಬ್ಬ ಅತಿಥಿ ಸ್ಥಳಿಯ ವ್ಯ. ಸೇ ಸಹಕಾರಿ ಸಂಘದ ಅಧ್ಯಕ್ಷ ಮೆಣಸಿಕೇರಿಯ ಗೋಪಾಲ ಹೆಗಡೆ ಹಾಗೂ ಸಭಾದ್ಯಕ್ಷತೆ ವಹಿಸಿದ್ದ ಚೈತನ್ಯ ಸಂಗೀತ ವಿದ್ಯಾಲಯದ ಅಧ್ಯಕ್ಷ ಕೆ ಎನ್ ಹೆಗಡೆ ಅಬ್ರಿ ಹೀಪನಳ್ಳಿ ಮಾತನಾಡಿದರು .
ವೇದಿಕೆಯಲ್ಲಿ ಕೀರ್ತನಕಾರರಾದ ನಾರಾಯಣ ದಾಸ್ ಉಪಸ್ಥಿತರಿದ್ದರು. ವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಹೆಗಡೆ ದಾಸನಕೊಪ್ಪ ಪ್ರಾಸ್ಥಾವಿಕ ಮಾತಿನೊಂದಿಗೆ ಸ್ವಾಗತಿಸಿದರೆ ಗಿರಿಧರ ಕಬ್ನಳ್ಳಿ ನಿರೂಪಿಸಿದರು ಚಿನ್ಮಯ ಹೆಗಡೆ ವಂದಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಮತ್ತು ಕೊಳಲು ಹಾರ್ಮೋನಿಯಂ ತಬಲಾಗಳ ತ್ರಿಗಲ್ಬಂದಿ ಕಾರ್ಯಕ್ರಮ ನಡೆಯಿತಿ ಕೊಳಲಿನಲ್ಲಿ ಸಮರ್ಥ ಹೆಗಡೆ ತಂಗಾರಮನೆ ಹಾರ್ಮೊನಿಯಂನಲ್ಲಿ ಸತೀಶ ಭಟ್ ಹೆಗ್ಗಾರ್ ತಬಲಾದಲ್ಲಿ ಗುರುರಾಜ ಆಡುಕುಳ ಪಾಲ್ಗೊಂಡರು. ನಂತರ ಗಾಯನ ಕಾರ್ಯಕ್ರಮದಲ್ಲಿ ಶ್ರೀಧರ ಹೆಗಡೆ ದಾಸನಕೊಪ್ಪ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕುಳ ಹಾರ್ಮೋನಿಯಂನಲ್ಲಿ ಸತೀಶ ಹೆಗ್ಗಾರ ಹಾಗೂ ತನಬೂರಾದಲ್ಲಿ ಪೂರ್ಣಿಮಾ ಸಹಕರಿಸಿದರು.