
ಶಿರಸಿ/ಸಿದ್ದಾಪುರ: ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್(AIDSO) ವತಿಯಿಂದ ಶಿರಸಿ ಹಾಗು ಸಿದ್ದಾಪುರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.ಡಿಪ್ಲೊಮಾ ಪದವಿಯಲ್ಲಿರುವ ಆಡ್ ಸೆಮಿಸ್ಟರ್ ಪದ್ಧತಿಯನ್ನು ರದ್ದುಗೊಳಿಸಬೇಕು, ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ಸಿಗುವವರೆಗೂ ಪರೀಕ್ಷೆ ನಡೆಸಬಾರದು, ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ತಾರತಮ್ಯ ಸಲ್ಲದು ಮುಂತಾದ ಬೇಡಿಕೆಗಳನ್ನು ಈಡೆರಿಸುವಂತೆ ಪ್ರತಿಭಟನೆಯಲ್ಲಿ ಕೋರಲಾಯಿತು.
ಈ ಕುರಿತು ಮಾತನಾಡಿದ ವಿದ್ಯಾರ್ಥಿ ಮುಖಂಡರು ಈಗಾಗಲೇ ಹಲವು ಬಾರಿ ಎ.ಐ.ಡಿ.ಎಸ್.ಒ ವತಿಯಿಂದ ಬೇಡಿಕೆಗಳನ್ನು ಈಡೆರಿಸುವಂತೆ ಹಲವು ಬಾರಿ ಟೆಕ್ನಿಕಲ್ ಎಜುಕೇಷನ್ ನವರಿಗೆ ಮನವಿ ನೀಡಲಾಗಿದೆ. ಸಂಬಂಧಪಟ್ಟವರು ಮನವಿಯನ್ನು ಸ್ವೀಕರಿಸುತ್ತಾರೆ. ಆದರೆ ಆ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆ ಮುಂದುವರೆದರೆ ಪರೀಕ್ಷೆ ಬರುವವರೆಗೂ ವಿದ್ಯಾರ್ಥಿಗಳು ಗೊಂದಲದಲ್ಲೇ ಇರಬೇಕಾಗುತ್ತದೆ. ಹಾಗಾಗಿ ಪ್ರತಿಭಟಿಸುವ ಮೂಲಕ ಮನವಿಗಳ ಈಡೆರಿಕೆಗೆ ಒತ್ತಾಯ ಮಾಡುತ್ತಿದ್ದೇವೆ. ಶಿವಮೊಗ್ಗ ಉಡುಪಿ ಉತ್ತರಕನ್ನಡ ಜಿಲ್ಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳು ಕೂಡ ಇದೇ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇನ್ನಾದರೂ ಸಂಬಂಧ ಪಟ್ಟವರು ವಿದ್ಯಾರ್ಥಿಗಳ ಗೊಂದಲವನ್ನು ಬಗೆಹರಿಸಬೇಕು ಎಂದು ಆಗ್ರಹಿಸಲಾಯಿತು. ಪ್ರಾಶುಂಪಾಲರ ಮೂಲಕ ಇಲಾಖೆಗೆ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು