ಶಿರಸಿ:ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಒಕ್ಕಲಕೊಪ್ಪ ಗ್ರಾಮದಲ್ಲಿ ವಿರಾಜಮಾನವಾಗಿ ನೆಲೆಸಿರುವ ಸುಪ್ರಸಿದ್ಧ ಹಾಗೂ ಹರಕೆಯ ಜಗದೀಶ್ವರ ಎಂದೆ ಪ್ರಖ್ಯಾತಿಗೊಂಡಿರುವ ದೇವರ ಸನ್ನಿದಾನದಲ್ಲಿ ಮಾ.1 ರ ಮಂಗಳವಾರ ದಂದು ಮಹಾ ಶಿವರಾತ್ರಿ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 7 ಗಂಟೆಯಿಂದ ದೇವರ ಶಿವಲಿಂಗಕ್ಕೆ ಅಭಿಷೇಕ ಹಾಗೂ ಪೂಜೆ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕ ತುಲಾಭಾರ ಸೇವೆ ನಡೆಯುತ್ತವೆ. ಸಂಜೆ 5 ಗಂಟೆಗೆ ರುಧ್ರಾಭಿಷೇಕ ಮತ್ತು ಶುದ್ದಿ ಹೋಮ ಕಾರ್ಯಗಳು ನಡೆಯುತ್ತವೆ. ರಾತ್ರಿ 8 ರಿಂದ ವಿಶೇಷ ಅಲಂಕಾರ ಪೂಜೆ ಮತ್ತು ಮಂಗಳಾರತಿ ನಡೆಯಲಿದ್ದು, ಅದೇ ದಿನ ರಾತ್ರಿ ಸರಿಯಾಗಿ 12.00 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು ತದನಂತರ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತದೆ.
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.